ಬೇಲೂರಿನ ಐತಿಹಾಸಿಕ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಅಡ್ಡೆಹೊರುವವರು ಮತ್ತು ಆಡಳಿತ ಮಂಡಳಿ ಮುಖಂಡರ ನಡುವಿನ ಜಗಳ ಬೀದಿಗೆ ಬಂದಿದೆ. ಗುರುವಾರ ನಡೆದ ಚನ್ನಕೇಶವಸ್ವಾಮಿ ಅನಂತ ಪದ್ಮನಾಭ ಉತ್ಸವದಲ್ಲಿ ಅಡ್ಡಗಾರರು ಗೈರಾಗಿದ್ದು, ಪ್ರತಿಭಟನೆ ನಡೆಸಿದ್ದಾರೆ. ಬೇಲೂರು ದೇವಾಲಯವು ವಿಶ್ವ ಪರಂಪರೆ ಪಟ್ಟಿಗೆ ಸೇರಿದ ಕೆಲವೇ ವಾರಗಳಲ್ಲಿ ಈ ಗಲಾಟೆ ನಡೆದಿದ್ದು, ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.
ಉತ್ಸವದಲ್ಲಿ ಅಡ್ಡೆ ಹೊರುವ ಅಡ್ಡಗಾರರಿಗೆ ದೇವಾಲಯ ಅಡಳಿತ ಮಂಡಳಿಯು ಅಗೌರವ ತೋರುತ್ತಿದೆ ಎಂದು ಆರೋಪಿ ಅಡ್ಡೆಗಾರರು ಆಡ್ಡೆ ಹೊರಲು ನಿರಾಕರಿಸಿದ್ದರು. ಅವರು ಗೈರಾಗಿದ್ದರಿಂದ ಅಧಿಕಾರಗಳೇ ಅಡ್ಡೆ ಹೊತ್ತು ಉತ್ಸವ ನಡೆಸಿದ್ದಾರೆ.
ಅಲ್ಲದೆ, ಅಡ್ಡೆಗಾರರು ಬಾರದ ಹಿನ್ನೆಲೆಯಲ್ಲಿ ಅಡ್ಡೆಯನ್ನು ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲು ತಹಶೀಲ್ದಾರ್ ಮುಂದಾಗಿದ್ದರು. ಅದಕ್ಕಾಗಿ, ಟ್ರ್ಯಾಕ್ಟರ್‌ಅನ್ನು ದೇವಾಲಯದ ಆವರಣಕ್ಕೆ ಕರೆಸಿದ್ದರು. ಅವರ ನಡೆಯನ್ನು ದೇವಾಲಯದ ಅರ್ಚಕರು ಮತ್ತು ಭಕ್ತರು ಖಂಡಿಸಿದ್ದಾರೆ. ಬಳಿಕ, ಕಂದಾಯ ಇಲಾಖೆಯ ಅಧಿಕಾರಿಗಳೇ ಅಡ್ಡೆ ಹೊತ್ತು ಉತ್ಸವ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕಾರಿಗಳು ಅಡ್ಡೆ ಹೊತ್ತಿದ್ದನ್ನು ಖಂಡಿಸಿ ಅಡ್ಡೆಗಾರರು ಪ್ರತಿಭಟನೆ ನಡೆಸಿದ್ದಾರೆ. ಅಡ್ಡೆಗಾರರೇ ಅಡ್ಡೆ ಹೊರುವ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ, ತಹಶೀಲ್ದಾರ್ ಮಮತಾ ಅವರು ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿವರ್ಷ ಬೇಲೂರಿನ ಪ್ರಮುಖ ನಾಲ್ಕು ಬೀದಿಗಳಲ್ಲಿ ಉತ್ಸವ ಸಾಗುತ್ತಿತ್ತು. ಆದರೆ, ಈ ವರ್ಷ ಅಡ್ಡೆಗಾರರ ಬಾರದ ಹಿನ್ನೆಲೆಯಲ್ಲಿ ದೇವಾಲಯದ ಅರವಣದಲ್ಲಿಯೇ ಉತ್ಸವ ನಡೆದಿದೆ.