ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು, ನೈರ್ಮಲ್ಯ, ಆರೋಗ್ಯ ಮತ್ತು ಆಹಾರವೇ ಹೊರತು, ಮದ್ಯವಲ್ಲ. ಸರ್ಕಾರ ಜನರ ಮೂಲಭೂತ ಸೌಕರ್ಯಗಳನ್ನು ಬಲಿಷ್ಠಗೊಳಿಸಬೇಕೇ ಹೊರತು, ಮದ್ಯದ ನಶಯನ್ನಲ್ಲ ಎಂದು ಸ್ಲಂ ಜನಾಂದೋಲನ ಸಂಘಟನೆಯ ಸಂಚಾಕಲ ಎ ನರಸಿಂಹಮೂರ್ತಿ ಹೇಳಿದ್ದಾರೆ.
ತುಮಕೂರಿನ ಎಸ್.ಎನ್ ಪಾಳ್ಯದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯು ಜಾಗೃತಿ ಸಭೆಯನ್ನು ನಡೆಸಿದೆ. ಸಭೆಯಲ್ಲಿ ಅವರು ಮಾತನಾಡಿದರು.
“ರಾಜ್ಯ ಸರ್ಕಾರದ ಅಬಕಾರಿ ಸಚಿವರು ಒಂದು ಸಾವಿರ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡುವ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದು ಬಡಜನರ ವಿರೋಧಿ ನೀತಿಯಾಗಿದೆ. ವಿಶೇಷವಾಗಿ ನಗರಪ್ರದೇಶಗಲ್ಲಿ ಕೂಲಿ ಮಾಡುವ ಬಡಜನರ ನೆಮ್ಮದಿಯ ಜೀವನವನ್ನು ಹಾಳು ಮಾಡುತ್ತದೆ. ಸರ್ಕಾರವು ಜನತೆಯನ್ನು ನಶೆಗೆ ತಳ್ಳುವ ನಡೆಯಿಂದ ಹಿಂದೆ ಬರಬೇಕು. ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು, ನೈರ್ಮಲ್ಯ, ಆರೋಗ್ಯ ಮತ್ತು ಆಹಾರ – ಈ ಅಂಶಗಳನ್ನು ಸರ್ಕಾರಗಳು ಬಲಿಷ್ಠಗೊಳಿಸಬೇಕೆ ಹೊರತು ಮಧ್ಯದ ನಶೆಯನ್ನಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಸಂಘಟನೆಯ ಮುಖಂಡ ಗುಲ್ನಾಜ್ ಮಾತನಾಡಿ, “ಸರ್ಕಾರದ ಗೃಹಲಕ್ಷ್ಮೀ, ಗೃಹ ಜ್ಯೋತಿ ಮತ್ತು ಅನ್ನ ಭಾಗ್ಯದಿಂದ ಬಡಜನರಿಗೆ ಅನುಕೂಲವಾಗಿದೆ. ಗಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಮುಂದಾದರೇ ನಮ್ಮ ಕುಟುಂಬದ ಆದಾಯ ಲಿಕ್ಕರ್ ಪಾಲಾಗುತ್ತದೆ. ಹಾಗಾಗಿ, ರೇಷನ್ ಅಂಗಡಿಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸರ್ಕಾರ ಚಿಂತಿಸಬೇಕು” ಎಂದರು.
ಸಭೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷ ಶಂಕರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ, ಮುಬಾರಕ್, ಮೋಹನ್ಕುಮಾರ್, ಶಿವಪ್ಪ, ಜಯಣ್ಣ, ಸೈಯದ್ಪೀರ್, ರಫೀಕ್, ಹನುಮಕ್ಕ, ಲಕ್ಷ್ಮಮ್ಮ, ಜಯಮ್ಮ, ಲಲಿತಮ್ಮ, ರೆಹಮಾನ್, ಮುಮ್ತಾಜ್ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಅರುಣ್, ಮಾಸ್ ಮೀಡಿಯಾ ವಾಲೆಂಟಿಯರ್, ತುಮಕೂರು