ಅರಣ್ಯ ಪ್ರದೇಶದಲ್ಲಿ ದಾರಿ ತಪ್ಪಿ ಹಳ್ಳಿ ಎಡೆಗೆ ಬಂದಿದ್ದ ಜಿಂಕೆ ನಾಲೆಗೆ ಬಿದ್ದಿದ್ದು, ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿತ್ತು. ಅದನ್ನು ಕಂಡ ಪೊಲೀಸರು ತಕ್ಷಣವೇ ಕಾರ್ಯಪ್ರೌವೃತ್ತರಾಗಿ ಜಿಂಕೆಯನ್ನು ರಕ್ಷಿಸಿದ್ದಾರೆ.
ಪೊಲೀಸರು ಜಿಂಕೆಯನ್ನು ರಕ್ಷಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಿರುಗುಂದ ಗ್ರಾಮದಲ್ಲಿ ನಡೆದಿದೆ. ನಾಲೆಗೆ ಬಿದ್ದು ಮೇಲಕ್ಕೆ ಬರಲಾಗದೆ ಪರದಾಡುತ್ತಿದ್ದ ಜಿಂಕೆಯನ್ನು ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ಕರಿಬಸಪ್ಪ ರಕ್ಷಣೆ ಮಾಡಿದ್ದಾರೆ.
ಜಿಂಕೆ ಅರಣ್ಯದಿಂದ ದಾರಿ ತಪ್ಪಿ ಕಿರುಗುಂದ ಗ್ರಾಮಕ್ಕೆ ಬಂದಿದೆ. ಈ ವೇಳೆ, ನಾಯಿಗಳು ಜಿಂಕೆ ಬೆನ್ನಟ್ಟಿವೆ. ಹೆದರಿದ ಜಿಂಕೆ ತಪ್ಪಿಸಿಕೊಳ್ಳಲು ಹೋಗಿ ನಾಲೆಗೆ ಬಿದ್ದಿದೆ. ನಾಲೆಯ ನೀರಿಯಲ್ಲಿ ಒದ್ದಾಡುತ್ತಾ ತೇಲಿ ಬರುತ್ತಿದ್ದ ಜಿಂಕೆಯನ್ನು ಕಂಡ ಪಿಎಸ್‌ಐ, ಗ್ರಾಮದ ಯುವಕರ ಸಹಾಯ ಪಡೆದು ಜಿಲ್ಲೆಯನ್ನು ರಕ್ಷಿಸಿದ್ದಾರೆ.
ಜಿಂಕೆಯ ಹಿಂಬದಿಯ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಂಜನಗೂಡಿನ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಗುವುದು ಎಂದು ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.