ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ, ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಸಿಎಂ ಇಬ್ರಾಹಿಂ ಅವರನ್ನು ಮತ್ತೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬಾರದು ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಏಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇಬ್ರಾಹಿಂ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ ಪಕ್ಷ ತೊರೆದಿದ್ದರು. ಈಗ ಮತ್ತೆ ಅವರು ಕಾಂಗ್ರೆಸ್ ಬರುತ್ತೇವೆಂದರೆ ಸೇರಿಸಿಕೊಳ್ಳಬಾರದು. ನಮ್ಮಲ್ಲಿ ಮುಸ್ಲಿಂ ನಾಯಕರು ಇಲ್ಲವೇ? ಜಮೀರ್ ಅಹ್ಮದ್ ಖಾನ್, ರಹೀಂ ಖಾನ್, ತನ್ವೀರ್ ಸೇಠ್, ನಸೀರ್ ಅಹ್ಮದ್ ಇಲ್ಲವೇ? ಅಧಿಕ್ಕಾರಕ್ಕಾಗಿ ಆಸೆಪಡುವವರು ಪಕ್ಷಕ್ಕೆ ಬೇಡ” ಎಂದಿದ್ದಾರೆ.
ಇನ್ನು, ಲಿಂಗಾಯಿತರಿಗೆ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲವೆಂದು ಹೇಳಿರುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ಕೆಲವರು ತಲೆ ಕೆಟ್ಟು ಮುಖ್ಯಮಂತ್ರಿ ಸ್ಥಾನದ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ತೆಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾಂಗ್ರೆಸ್ ಜನರ ಆಶೀರ್ವಾದದಿಂದ 136 ಸ್ಥಾನಗಳನ್ನು ಗೆದ್ದಿದೆ. ಸರ್ಕಾರವೂ ಸಹ ಸುಭಿಕ್ಷವಾಗಿ ನಡೆದುಕೊಂಡು ಹೋಗುತ್ತಿದೆ” ಎಂದು ಹೇಳಿದ್ದಾರೆ.
“ಯಾವುದೇ ಶಾಸಕರಿಗೆ ಏನನ್ನಾದರೂ ಮಾತನಾಡಲೇಬೇಕು ಎಂದಿದ್ದರೆ, ಅವರವರ ಕ್ಷೇತ್ರಗಳ ಸಮಸ್ಯೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡಲಿ. ಕ್ಷೇತ್ರಕ್ಕಾಗಿ ಕೆಲಸ ಮಾಡಲಿ. ತಮ್ಮ ಕ್ಷೇತ್ರದ ಅಗತ್ಯಗಳ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿ. ಅನಗತ್ಯವಾಗಿ ಮಾತನಾಡುವವರನ್ನು ಪಕ್ಷದಿಂದ ದೂರ ಇಡಬೇಕು” ಎಂದು ಹೇಳಿದ್ದಾರೆ.
👍🏾 👍🏾 👍🏾