ಉತ್ತರ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಅಕ್ಟೋಬರ್ 14 ರಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಅತಿ ದೊಡ್ಡ ಪ್ರತಿಮೆಯೊಂದು ಅನಾವರಣಗೊಳ್ಳಲಿದೆ.
ಈ ಪ್ರತಿಮೆಗೆ ‘ಸಮಾನತೆಯ ಪ್ರತಿಮೆ’ ಎಂದು ಹೆಸರಿಡಲಾಗಿದೆ. ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನ ದಕ್ಷಿಣ ಭಾಗದಲ್ಲಿನ 35 ಕಿ. ಮೀ. ದೂರದಲ್ಲಿ ಇರುವ ಮೇರಿಲ್ಯಾಂಡ್‌ನ ಅಕೋಕೀಕ್ ನಗರದಲ್ಲಿ 13 ಎಕರೆ ವಿಸ್ತಾರದ ಪ್ರದೇಶದಲ್ಲಿ ಅಂಬೇಡ್ಕರ್ ಅವರ 19 ಅಡಿ ಎತ್ತರದ ಪುತ್ಥಳಿ ಅನಾವರಣಗೊಳ್ಳಲಿದೆ.
ಗುಜರಾತ್‌ನಲ್ಲಿ ಸರ್ದಾರ್ ಪಟೇಲ್ ಅವರ ಏಕತೆಯ ಪ್ರತಿಮೆಯನ್ನು ನಿರ್ಮಿಸಿದ್ದ ರಾಮ್ ಸುತಾರ್ ಅವರೇ ಇದೀಗ ಬಾಬಾ ಸಾಹೇಬ್ ಅವರ ಪ್ರತಿಮೆಯನ್ನೂ ನಿರ್ಮಿಸಿದ್ದಾರೆ.
ಭಾರತದ ಹೊರಗೆ ನಿರ್ಮಿಸಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರ ಅತಿ ದೊಡ್ಡ ಪ್ರತಿಮೆ ಇದಾಗಿದೆ ಎಂದು ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ (ಎಐಸಿ) ಹೇಳಿದ್ದು, ಬಾಬಾ ಸಾಹೇಬ್ ಅವರ ಸ್ಮರಣಾರ್ಥ ಈ ಪ್ರತಿಮೆಯನ್ನು ತಮ್ಮ ಕೇಂದ್ರದಲ್ಲಿ ನಿರ್ಮಿಸುತ್ತಿರುವುದಾಗಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮುಂಬೈ ನಿವಾಸದ ಮೇಲೆ ಪೊಲೀಸರ ದಾಳಿ
“ಅಮೆರಿಕ ಮತ್ತು ವಿಶ್ವದ ಇತರ ಭಾಗಗಳಿಂದ ಬಾಬಾ ಸಾಹೇಬ್ ಅವರ ಹೆಚ್ಚಿನ ಸಂಖ್ಯೆಯ ಅನುಯಾಯಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ” ಎಐಸಿ ಹೇಳಿದೆ.
ಈ ಸ್ಮಾರಕವು ತಮ್ಮ ಜೀವಮಾನದುದ್ದಕ್ಕೂ ದಲಿತರ ಹಾಗೂ ಅಸ್ಪೃಷ್ಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ ಬಾಬಾ ಸಾಹೇಬರ ಸಂದೇಶಗಳು ಮತ್ತು ಬೋಧನೆಗಳನ್ನು ಹರಡಲು ಮತ್ತು ಸಮಾನತೆ ಮತ್ತು ಮಾನವ ಹಕ್ಕುಗಳ ಸಂಕೇತವನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ ಎಂದು ಎಐಸಿ ತಿಳಿಸಿದೆ.
53 ವರ್ಷಗಳ ಹಿಂದೆ ಅಕ್ಟೋಬರ್ 14, 1956ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ 5 ಲಕ್ಷ ಅನುಯಾಯಿಗಳ ಜೊತೆಗೆ ಹಿಂದೂ ಧರ್ಮದಿಂದ ಬೌದ್ದ ಧರ್ಮಕ್ಕೆ ಮತಾಂತರ ಆಗಿದ್ದರು. ನಾಗಪುರದಲ್ಲಿ ನಡೆದ ಈ ಕಾರ್ಯಕ್ರಮ ಐತಿಹಾಸಿಕ ಸನ್ನಿವೇಶವಾಗಿತ್ತು. ಇದನ್ನು ಇತಿಹಾಸದ ಅತಿ ದೊಡ್ಡ ಸಾಮೂಹಿಕ ಮತಾಂತರ ಕಾರ್ಯಕ್ರಮ ಎಂದೂ ಬಣ್ಣಿಸಲಾಗಿದೆ.
ಈ ಕಾರಣದಿಂದ ಬಾಬಾ ಸಾಹೇಬ್ ಅವರು ಬೌದ್ದ ಧರ್ಮಕ್ಕೆ ಮತಾಂತರ ಹೊಂದಿದ ದಿನದಂದೇ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಅವರ ಪ್ರತಿಮೆ ಅನಾವರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಎಐಸಿ ತಿಳಿಸಿದೆ.
ಬಾರತದಲ್ಲಿ ಮಾನ್ಯರಾಗಿದ್ದ ಬಾಬಾಸಾಹೇಬರು ಬುದ್ದಿಸ್ಟ್ ಬಾಬಾಸಾಹೇಬರಾಗಿ ವಿಶ್ವ ಮಾನ್ಯರಾಗಿದ್ದಾರೆ