- 48 ಗಂಟೆಗಳಲ್ಲಿ 31 ರೋಗಿಗಳು ಸಾವಿಗೀಡಾಗಿದ್ದ ಮಹಾರಾಷ್ಟ್ರದ ನಾಂದೇಡ್ನ ಸರ್ಕಾರಿ ಆಸ್ಪತ್ರೆ
- ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಸಂಸದ ಹೇಮಂತ್ ಪಾಟೀಲ್
48 ಗಂಟೆಗಳಲ್ಲಿ 31 ರೋಗಿಗಳು ಸಾವಿಗೀಡಾಗುವ ಮೂಲಕ ದೇಶಾದ್ಯಂತ ಸುದ್ದಿಯಾಗಿರುವ ಮಹಾರಾಷ್ಟ್ರದ ನಾಂದೇಡ್ ಆಸ್ಪತ್ರೆ ವಿವಾದದ ಸುಳಿಯಲ್ಲಿ ಸಿಲುಕಿದೆ.
ಈ ನಡುವೆ ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿದ್ದ ಶಿವಸೇನಾ ಸಂಸದ ಹೇಮಂತ್ ಪಾಟೀಲ್, ಆಸ್ಪತ್ರೆಯ ಶೌಚಾಲಯ ಅವ್ಯವಸ್ಥೆ ಕಂಡು ಆಕ್ರೋಶ ಹೊರಹಾಕಿದ್ದಲ್ಲದೇ, ಡೀನ್ ಅವರಿಂದಲೇ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದರು. ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಕೂಡ ಆಗಿತ್ತು. ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಯ ಆರೋಪದ ದೂರಿನ ಮೇರೆಗೆ ಸಂಸದನ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
शिवसेना खासदार हेमंत पाटलांनी नांदेडच्या डीनला शौचालय साफ करायला लावलं!#HemantPatil #Nanded #MTShorts pic.twitter.com/oZtVsoLtCb
— Mumbai Tak (@mumbaitak) October 3, 2023
ಪಾಟೀಲ್ ವಿರುದ್ಧ ಆಸ್ಪತ್ರೆಯ ಡೀನ್ ಡಾ.ಶ್ಯಾಮರಾವ್ ವಾಕೋಡೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ. ಸರ್ಕಾರಿ ನೌಕರನ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿದ ಮತ್ತು ಮಾನಹಾನಿ ಮಾಡಿದ ಆರೋಪದ ಮೇಲೆ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಸದ ಪಾಟೀಲ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಣಕ್ಕೆ ಸೇರಿದ್ದಾರೆ. ಎರಡು ದಿನದಲ್ಲಿ 31 ರೋಗಿಗಳು ಮೃತಪಟ್ಟ ಘಟನೆ ತಿಳಿದ ಕೂಡಲೇ ಪಾಟೀಲ್ ಅವರು ನಾಂದೇಡ್ನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
BJP MP Hemant Patil makes dean clean toilet of Maharashtra hospital where 31 died in 2 days#Nanded #BJP #MP #HemantPatil #Hospital #Dean pic.twitter.com/A0noyLQreH
— IndiaToday (@IndiaToday) October 3, 2023
ಈ ವೇಳೆ ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲದೇ, ಆಸ್ಪತ್ರೆಯ ಡೀನ್ ವಾಕೋಡೆ ಅವರಿಗೆ ಪೊರಕೆ ನೀಡಿ ಕೊಳಕು ಶೌಚಾಲಯದ ಗೋಡೆಯನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದ್ದರಿಂದ, ಡೀನ್ ಅವರೇ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದರು. ಅಲ್ಲದೇ, ಖುದ್ದು ಸಂಸದನೇ ನೀರು ಹರಿಸಿದ್ದನು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
31 newborns lost their lives at a Govt Hospital Nanded.
— Dr Nazma (@nazmaaman) October 3, 2023
Cause of death- Shortage of medicines.
Solution- M.P Hemant Patil made Dean Dr. Shyamrao Wakode clean the toilets.
He still got away easy, if it was a Kafeel Khan instead, he would be in jail. pic.twitter.com/w3Ttr9SnwP
ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಂಸದ ಪಾಟೀಲ್ ವಿರುದ್ಧ ಸರ್ಕಾರಿ ನೌಕರನ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಮಾನಹಾನಿ, ಕ್ರಿಮಿನಲ್ ಬೆದರಿಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 31 ಸಾವುಗಳು ಸಂಭವಿಸಿದ್ದು, ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಆಸ್ಪತ್ರೆಗೆ ಭೇಟಿ ನೀಡುವ ಮುನ್ನವೇ ಆಸ್ಪತ್ರೆಗೆ ಬಂದಿದ್ದ ಸಂಸದ ಪಾಟೀಲ್, ಕೊಳಚೆ ಸ್ಥಿತಿಯಲ್ಲಿರುವ ಶೌಚಾಲಯವನ್ನು ಗಮನಿಸಿದರು. ಅದನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದರು ಎಂದು ಆಸ್ಪತ್ರೆಯ ಡೀನ್ ಡಾ.ಶ್ಯಾಮರಾವ್ ವಾಕೋಡೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.