ರಾಗಿಗುಡ್ಡ ಘಟನೆ ಸಂಬಂಧ ಈವರೆಗೆ 24 ಎಫ್‌ಐಆರ್ ದಾಖಲಾಗಿದ್ದು, 60 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮೂರು ಸುಮುದಾಯಕ್ಕೂ ಸೇರಿದವರಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಘಟನೆ ಸಂಬಂಧ ಮೂರು ಸಮುದಾಯದವರನ್ನೂ ಬಂಧಿಸಲಾಗಿದೆ” ಎಂದು ತಿಳಿಸಿದರು.
“ರಾಗಿಗುಡ್ಡದಲ್ಲಿ ಈದ್ ಮೆರವಣಿಗೆ ಸಂದರ್ಭ ಸಿಸಿಟಿವಿ, ಡ್ರೋಣ್ ವಿಡಿಯೋ, ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಎರಡೆರಡು ಬಾರಿ ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಯಾರೆಲ್ಲ ನಿಜವಾಗಿಯೂ ಕಲ್ಲು ತೂರಿದ್ದಾರೆ ಅಂಥವರ ವಿರುದ್ಧ ಪ್ರಕರಣ ದಾಖಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ ಗಲಭೆ | ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆತಂಕ ಅಗತ್ಯವಿಲ್ಲ: ಎಸ್‌ಪಿ
“ರಾಗಿ ಗುಡ್ಡದಲ್ಲಿ ವಾತಾವರಣ ತಿಳಿಯಾಗಿದೆ. ಶಾಂತಿಯುತವಾಗಿದೆ. ಅದರ ಪರಿಣಾಮ ಶಿವಮೊಗ್ಗ ನಗರದಲ್ಲಿ ಆಗಿಲ್ಲ. ನಗರದಲ್ಲಿ ವ್ಯಾಪಾರ ವಹಿವಾಟು ಸರಾಗವಾಗಿ ನಡೆಯುತ್ತಿದೆ. ಮಾಧ್ಯಮಗಳು ಅದು ಇದು ಅಂತ ತೋರಿಸುತ್ತಿದ್ದಾರೆ. ನಾನು ಮಾಧ್ಯಮಗಳಿಗೂ ಕೂಡ ಮನವಿ ಮಾಡಿಕೊಳ್ಳುತ್ತೇನೆ. ಸತ್ಯ ತೋರಿಸಿ” ಎಂದರು.