ನಾಡಿನ ಹೆಮ್ಮೆಯ ಪರಿಸರ ಹೋರಾಟಗಾರ್ತಿ, ಪದ್ಮ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರು ನಿಧನರಾಗಿದ್ದಾರೆ ಎಂದು ವದಂತಿ ಹಬ್ಬಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ತಿಮ್ಮಕ್ಕನವರ ಸಾಕು ಮಗ ಉಮೇಶ್ ವನಸಿರಿ ಅವರು ವಿಡಿಯೊ ಹಂಚಿಕೊಂಡಿದ್ದು, ‘ಆರೋಗ್ಯವಾಗಿದ್ದಾರೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಸಾಲು ಮರದ ತಿಮ್ಮಕ್ಕ ಆರೋಗ್ಯ ಏರುಪೇರಾಗಿದ್ದು, ನಿರಂತರವಾಗಿ ಕಳೆದೊಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಆದರೆ, ಕೆಲವರು ಸಾಲು ಮರದ ತಿಮ್ಮಕ್ಕ ಅವರು ಬದುಕಿರುವಾಗಲೇ ಸತ್ಯಾಂಶ ತಿಳಿದುಕೊಳ್ಳದೇ ಭಾವಪೂರ್ಣ ಶ್ರದ್ಧಾಂಜಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾಲು ಮರದ ತಿಮ್ಮಕ್ಕ ‘ನಿಧನರಾಗಿದ್ದಾರೆ’ ಎಂದು ದಯವಿಟ್ಟು ಯಾರೂ ಸುಳ್ಳು ಸುದ್ದಿ ಹರಡಬೇಡಿ. ಆರೋಗ್ಯವಾಗಿದ್ದಾರೆ. ತಿಮ್ಮಕ್ಕನವರ ಸಾಕು ಮಗ ಉಮೇಶ್ ವನಸಿರಿ ಅವರು ವಿಡಿಯೊ ಹಂಚಿಕೊಂಡಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.#salumaradatimmakka @eedinanews @siddaramaiah @CMofKarnataka @BlrCityPolice @CPBlr pic.twitter.com/F3SagKoyPb
— Irshad Venur (@muhammadirshad6) October 5, 2023
ಸುಳ್ಳು ಸುದ್ದಿ ಹರಡಿದ್ದ ಹಿನ್ನೆಲೆಯಲ್ಲಿ, ತಿಮ್ಮಕ್ಕ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿರುವ ಬಗ್ಗೆ ದತ್ತುಪುತ್ರ ಉಮೇಶ್ ಆಸ್ಪತ್ರೆಯಲ್ಲಿ ಆಹಾರ ಸೇವನೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕಳೆದೊಂದು ವಾರದಿಂದ ಪದ್ಮ ಪ್ರಶಸ್ತಿ ಪುರಸ್ಕೃತೆ ಸಾಲಮರದ ತಿಮ್ಮಕ್ಕ ಅವರು ಬೇಲೂರಿನ ಸಂಬಂಧಿಕರ ಮನೆಗೆ ಹೋದಾಗ ಮನೆಯಲ್ಲಿ ಬಿದ್ದು ಅನಾರೋಗ್ಯ ಉಂಟಾಗಿದ್ದು, ಹಾಸನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅಲ್ಲಿ ಚಿಕಿತ್ಸೆಗೆ ಹೆಚ್ಚಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಬೆಂಗಳೂರಿನಗೆ ಕರೆತರಲಾಗಿತ್ತು. ಇನ್ನು ಬೆಂಗಳೂರಿನ ಸದ್ಯ ವೈದ್ಯರು ತಿಮ್ಮಕ್ಕ ಅವರಿಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಾಲು ಮರದ ತಿಮ್ಮಕ್ಕನಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಬೇಲೂರಿನ ಸಮೀಪದ ಬಳ್ಳೂರಿನ ಮನೆಯಲ್ಲಿ ವಾಸವಾಗಿರುವ ಸಾಲುಮರದ ತಿಮ್ಮಕ್ಕ ದಿಢೀರನೆ ವಾತಾವರಣ ಬದಲಾವಣೆಯಿಂದ ಉಸಿರಾಟ ಸಮಸ್ಯೆ ಉಂಟಾಗಿತ್ತು.