ಜೈಲಿನಲ್ಲಿ ಸಾವನ್ನಪ್ಪಿದ ಖೈದಿಗಳ ಕುಟುಂಬಕ್ಕೆ ಪರಿಹಾರ; ಹೈಕೋರ್ಟ್‌ಗೆ ಸರ್ಕಾರ ಹೇಳಿಕೆ

Date:

Advertisements

2012ರಿಂದ ರಾಜ್ಯದಲ್ಲಿನ ಕಾರಾಗೃಹಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಮೃತ ಖೈದಿಗಳ ಸಂಬಂಧಿಕರಿಗೆ ಪರಿಹಾರವನ್ನು ಪಾವತಿಸಲು ನೀತಿಯನ್ನು ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಕೈದಿಗಳ ನಡುವಿನ ಜಗಳದಿಂದ ಮರಣ ಹೊಂದಿದಲ್ಲಿ ಮೃತ ಖೈದಿಯ ಕುಟುಂಬಕ್ಕೆ ₹7.50 ಲಕ್ಷ ಮತ್ತು ಆತ್ಮಹತ್ಯೆ ಸೇರಿದಂತೆ ಜೈಲಿನಲ್ಲಿ ಯಾವುದೇ ಅಸಹಜ ಸಾವು ಸಂಭವಿಸಿದಲ್ಲಿ ₹5 ಲಕ್ಷ ಪರಿಹಾರ ನೀಡಬೇಕು. ಜನವರಿ 1, 2012 ರಿಂದ ರಾಜ್ಯದಾದ್ಯಂತ ಕಾರಾಗೃಹಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದ ಕೈದಿಗಳಿಗೆ ಈ ನೀತಿಯು ಅನ್ವಯಿಸುತ್ತದೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠವು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಿಲೇವಾರಿ ಮಾಡಿದೆ.

Advertisements

ಜೈಲಿನಿಂದ ತಪ್ಪಿಸಿಕೊಳ್ಳುವಾಗ ಅಥವಾ ಪೆರೋಲ್‌ನಲ್ಲಿರುವಾಗ ಅಥವಾ ಜೈಲಿನ ಹೊರಗೆ ಕಾನೂನುಬದ್ಧ ಬಂಧನದಿಂದ ಸಾವು ಸಂಭವಿಸಿದರೆ, ಅನಾರೋಗ್ಯ ಸೇರಿದಂತೆ ಸಹಜ ಸಾವಿನ ಪ್ರಕರಣ ಹಾಗೂ ಯಾವುದೇ ನೈಸರ್ಗಿಕ ವಿಕೋಪದಿಂದ ಸಾವು ಸಂಭವಿಸಿದರೆ ಪರಿಹಾರ ನೀಡಲಾಗುವುದಿಲ್ಲ ಎಂದು ಹೇಳಿದೆ.

ಜೈಲಿನಲ್ಲಿ ಅಸ್ವಾಭಾವಿಕವಾಗಿ ಸಾವನ್ನಪ್ಪಿದ ಖೈದಿಗಳನ್ನು ಗುರುತಿಸಲು ರಾಜ್ಯ ಸರ್ಕಾರವು ಯೋಜನೆಯನ್ನು ರೂಪಿಸಿದೆ. 2017 ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಸ್ವಯಂ ಪ್ರೇರಿತ ಪಿಐಎಲ್ ಅನ್ನು ದಾಖಲಿಸಿದ್ದ ಹೈಕೋರ್ಟ್ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನಗಳ ಮೇಲೆ ನೀತಿಯನ್ನು ರೂಪಿಸಿದೆ. 2012ರಿಂದ ಮೃತ ಖೈದಿಗಳ ಮುಂದಿನ ಸಂಬಂಧಿಕರನ್ನು ಗುರುತಿಸಿ ಮತ್ತು ಅವರಿಗೆ ಸಮಂಜಸವಾದ ಪರಿಹಾರವನ್ನು ಪಾವತಿಸಬೇಕು ಎಂದು ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅಕ್ಟೋಬರ್ 2022ರಲ್ಲಿ ರೂಪಿಸಿದ ನೀತಿಯನ್ನು ಗಮನಿಸಿ, ಅರ್ಜಿಯಲ್ಲಿ ಎದ್ದಿರುವ ಕುಂದುಕೊರತೆಗಳನ್ನು ಸರ್ಕಾರವು ಸೂಕ್ತವಾಗಿ ಪರಿಹರಿಸಿದೆ ಎಂಬುದನ್ನು ಗಮನಿಸಿ ಅರ್ಜಿಯನ್ನು ವಿಲೇವಾರಿ ಮಾಡಿದೆ.

ಜನವರಿ 1, 2012 ರಿಂದ ಕರ್ನಾಟಕದ ಕಾರಾಗೃಹಗಳಲ್ಲಿ ಅಸ್ವಾಭಾವಿಕ ಮರಣಕ್ಕೆ ಒಳಗಾದ ಖೈದಿಗಳ ಮುಂದಿನ ಸಂಬಂಧಿಕರಿಗೆ, ಮೃತ ಕೈದಿಯ ಮುಂದಿನ ಸಂಬಂಧಿಕರು ವಾಸಿಸುವ ಜಿಲ್ಲೆಗಳ ಉಪ ಆಯುಕ್ತರ ಮೂಲಕ ಪರಿಹಾರವನ್ನು ಪಾವತಿಸಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ 100 ಕಡೆ ಏಕಕಾಲದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ

ಜೈಲುಗಳ ಮುಖ್ಯಸ್ಥರು ಖೈದಿಯ ಅಸಹಜ ಸಾವಿನ ವರದಿಯನ್ನು ಪೊಲೀಸ್ ಮಹಾನಿರ್ದೇಶಕರು, ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಜೊತೆಗೆ ಮ್ಯಾಜಿಸ್ಟ್ರೇಟ್ ವಿಚಾರಣೆಯ ವರದಿ, ಮರಣೋತ್ತರ ಪರೀಕ್ಷೆ, ಸಾವಿನ ಅಂತಿಮ ಕಾರಣ, ವೈದ್ಯಕೀಯ ಇತಿಹಾಸ ಮತ್ತು ನೀಡಿದ ಚಿಕಿತ್ಸೆಗಳ ವರದಿಯನ್ನು ಸಲ್ಲಿಸಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X