ಬಸ್ಸಿಗೆ ಬೆಂಕಿ ಹಾಕುತ್ತೇನೆ ಎನ್ನುವವನು, ಕೊಲೆ, ಸುಲಿಗೆ ನಡೆಸುವವನು ಗೂಂಡಾ ಅಲ್ಲದೆ ಇನ್ನೇನು? ಆತನ ವಿರುದ್ಧ ಪ್ರಕರಣ ದಾಖಲಿಸದೆ ಮುದ್ದಾಡಬೇಕಿತ್ತೇ? ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಬಸ್ಸಿಗೆ ಬೆಂಕಿ ಹಾಕುತ್ತೇನೆ ಎನ್ನುವ ಪುನಿತ್ ಕೆರೆಹಳ್ಳಿಯ ವಿಡಿಯೋ ಸಮೇತ ಟ್ವೀಟ್ ಮಾಡಿರುವ ಕಾಂಗ್ರೆಸ್, “ಕಲ್ಲೆಸೆಯುವವರು, ಬಸ್ಸಿಗೆ ಬೆಂಕಿ ಹಾಕುವವರು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವವರು ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿತ ಗೂಂಡಾಗಳೇ ಎನ್ನುವುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಇಂತಹ ಕ್ರಿಮಿನಲ್ ಒಬ್ಬನಿಗೆ ಬಿಜೆಪಿ ನಾಯಕರು ಸಾಲುಗಟ್ಟಿ ನಿಂತು ಬೆಂಬಲಿಸುವ ಮೂಲಕ ಸ್ವಸ್ಥ ಸಮಾಜಕ್ಕೆ ಕೊಳ್ಳಿ ಇಡುತ್ತಿದ್ದಾರೆ” ಎಂದು ಟೀಕಿಸಿದೆ.
ಕಲ್ಲೆಸೆಯುವವರು, ಬಸ್ಸಿಗೆ ಬೆಂಕಿ ಹಾಕುವವರು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವವರು ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿತ ಗೂಂಡಾಗಳೇ ಎನ್ನುವುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ.
ಬಸ್ಸಿಗೆ ಬೆಂಕಿ ಹಾಕುತ್ತೇನೆ ಎನ್ನುವವನು, ಕೊಲೆ, ಸುಲಿಗೆ ನಡೆಸುವವನು ಗೂಂಡಾ ಅಲ್ಲದೆ ಇನ್ನೇನು, ಆತನ ವಿರುದ್ಧ ಪ್ರಕರಣ ದಾಖಲಿಸದೆ… pic.twitter.com/yENJYccHuO
— Karnataka Congress (@INCKarnataka) October 6, 2023