ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ವೀಕ್ಷಣೆ ಕೈಗೊಂಡು ರೈತರೊಂದಿಗೆ ಚರ್ಚೆ ನಡೆಸಿತು.
ದೊಡ್ಡೂರು ಗ್ರಾಮಕ್ಕೆ ಬೆಳಿಗ್ಗೆ 10-30ಕ್ಕೆ ಆಗಮಿಸಿದ ತಂಡ ಗ್ರಾಮದ ರೈತ ಟೋಪಣ್ಣ ಲಮಾಣಿ ಅವರ ಜಮೀನಿಗೆ ಭೇಟಿ ಶೇಂಗಾ ಬೆಳೆಯನ್ನು ವೀಕ್ಷಿಸಿ, ಒಂದು ಎಕರೆಗೆ ಎಷ್ಟು ಇಳುವರಿ ಬರುತ್ತದೆ. ಎಷ್ಟು ಹಣ ಖರ್ಚು ಮಾಡುತ್ತೀರಿ, ಎಷ್ಟು ವರ್ಷಗಳಿಂದ ಬರಗಾಲವಿದೆ, ನಮ್ಮಿಂದ ಏನು ಸಹಾಯ ಬೇಕು ಇತ್ಯಾದಿ ಪ್ರಶ್ನೆಗಳನ್ನು ಕೇಳಿದಾಗ, ರೈತ “1214 ಕ್ವಿಂಟಲ್ ಬೆಳೆಯಲು ಅಂದಾಜು ₹28,000 ಖರ್ಚಾಗುತ್ತದೆ. 10ರಿಂದ 15 ವರ್ಷಗಳಿಂದಲೂ ಬರಗಾಲವಿದೆ. ಈಗಲಾದರೂ ಬೆಳೆವಿಮೆ ಮಾಡಿಸಿಕೊಡಬೇಕು” ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಕೇಂದ್ರ ಬರ ಅಧ್ಯಯನ ತಂಡ ಪ್ರಶ್ನೆಗಳನ್ನು ಕೇಳುವುದರ ಮೂಲಕ ರೈತರಿಂದ ಮಾಹಿತಿ ಪಡೆಯಿತು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸೋಲಾರ್ ಪಾರ್ಕ್ ಎರಡನೇ ಹಂತದ ವಿಸ್ತರಣೆ ಕಾರ್ಯ ಚುರುಕು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ ಎಲ್ ವೈಶಾಲಿ, ಲಕ್ಷ್ಮೇಶ್ವರ ತಾಲೂಕು ದಂಡಾಧಿಕಾರಿ ಆನಂದ, ಕೃಷಿ ಇಲಾಖೆ ಅಧಿಕಾರಿಗಳದ ಚಂದ್ರಶೇಖರ, ನರಸಿಂಹ, ಗ್ರಾಮ ಲೆಕ್ಕಾಧಿಕಾರಿ ಸುಷ್ಮಾ ಹವಳದ, ಮಾಂತೇಶ ಉಮಚಗಿ, ದೊಡ್ಡೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ತೋಟದ, ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಇ ಹಾಗೂ ಹಾಲಿ ಸದಸ್ಯರುಗಳಾದ ಚಂದ್ರಶೇಖರ ಈಳಿಗೇರ, ನಾನಪ್ಪ ಲಮಾಣಿ, ನಿಂಗಪ್ಪ ಬಂಕಾಪೂರ, ಊರಿನ ಹಿರಿಯರುಗಳಾದ ಎನ್ ಎಚ್ ಹಡಪದ, ದೇವಪ್ಪ ತೋಟದ, ಶಿವಣ್ಣ ಹೆಸರೂರ, ನಾಗರಾಜ ಹರವಿರವರು, ಗುಡ್ಡಪ್ಪ ಹಡಪದ, ರವಿ ಭಜಕ್ಕನವರ, ಗುರುರಾಜ ಬಾಗಲದ ಸೇರಿದಂತೆ ಇತರರು ಇದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ ಸಿಟಿಜನ್ ಜರ್ನಲಿಸ್ಟ್