ಅನಾವೃಷ್ಟಿಯಿಂದಾಗಿ ಬೆಳೆ ಕೈಕೊಟ್ಟಿದ್ದು, ಸಾಲದ ಹೊರೆ ಹೆಚ್ಚಾಗಿದ್ದು ಒಂದೆಡೆಯಾದರೆ, ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ನ ಕಿರುಕುಳ ಮತ್ತೊಂದೆಡೆ. ಸಾಲ ತೀರಿಸುವಂತೆ ಪದೇ-ಪದೇ ಕಿರುಕುಳ ನೀಡುತ್ತಿದ್ದ ಮೈಕ್ರೋ ಪೈನಾನ್ಸ್ ಸಿಬ್ಬಂದಿಗಳ ಒತ್ತಡಕ್ಕೆ ಬೇಸತ್ತು ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಗ್ರಾಮದ ರೈತ ಮಹಿಳೆ ದೇವೀರಮ್ಮ (64) ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ. ಅವರು ಕಡೂರಿನ ಗ್ರಾಮೀಣ ಕೂಟ ಫೈನಾನ್ಸ್ನಲ್ಲಿ 78,000 ರೂ. ಸಾಲ ಪಡೆದಿದ್ದರು. ಆದರೆ, ಬೆಳೆ ಕೈಕೊಟ್ಟ ಕಾರಣ ಸಾಲದ ಕಂತನ್ನು ಪಾವತಿಸಲು ಆಗಿರಲಿಲ್ಲ.
ಫೈನಾನ್ಸ್ ಸಿಬ್ಬಂದಿಗಳು ಅವರ ಮನೆ ಬಳಿ ಬಂದು ಸಾಲ ಪಾವತಿಸುವಂತೆ ಪದೇ-ಪದೇ ಒತ್ತಡ ಹಾಕಿದ್ದಾರೆ. ಸಿಬ್ಬಂದಿ ಕಿರುಕುಳಕ್ಕೆ ಮನನೊಂದ ದೇವೀರಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣ ಸಂಬಂಧ ಗ್ರಾಮಿಣ ಕೂಟ ಫೈನಾನ್ಸ್ ಸಿಬ್ಬಂದಿ ಶಂಕರ್ ನಾಯಕ್, ಉಷಾ, ರುಬೀನಾ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Please do not death please take the next time and next week