ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್ ಬಂಡುಕೋರರು ಸಾವಿರಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿದ ಬಳಿಕ ಹಮಾಸ್ ಹಾಗೂ ಇಸ್ರೇಲ್ ಪರಸ್ಪರ ಯುದ್ಧ ಘೋಷಿಸಿಕೊಂಡಿದೆ.
ಈ ಯುದ್ಧಕ್ಕೆ ಇಸ್ರೇಲಿ ಸೇನೆಯು ‘ಆಪರೇಷನ್ ಐರನ್ ಸ್ವೋರ್ಡ್ಸ್’ ಎಂದು ಘೋಷಿಸಿಕೊಂಡರೆ, ಹಮಾಸ್‌ನವರು ‘ಅಲ್-ಅಕ್ಸಾ ಫ್ಲಡ್’ ಎಂದು ಘೋಷಿಸಿಕೊಂಡಿದೆ.
ಗಾಝಾ ನಗರದಲ್ಲಿ ರಾಕೆಟ್ ದಾಳಿಯಿಂದ ಉಂಟಾಗುತ್ತಿರುವ ಸ್ಫೋಟದ ಸದ್ದು ಕೇಳಿಬರುತ್ತಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
LATEST : A Huge Blast has been reported in Southern Israel.#Israel #Palestine #Hamas pic.twitter.com/j0FYiVGn1h
— Hareem Shah (@_Hareem_Shah) October 7, 2023
ಗಾಝಾ ಪಟ್ಟಿಯಿಂದ ಪ್ಯಾಲೆಸ್ತೀನ್‌ನ ಹಮಾಸ್ ಬಂಡುಕೋರರು ರಾಕೆಟ್ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ‘ಯುದ್ಧದ ಸ್ಥಿತಿ’ ಘೋಷಿಸಿದೆ.
ಶನಿವಾರ ಹಬ್ಬದ ರಜೆಯ ಸಂದರ್ಭದಲ್ಲಿ ಮುಂಜಾನೆ 5000ಕ್ಕೂ ಅಧಿಕ ರಾಕೆಟ್‌ಗಳನ್ನು ಇಸ್ರೇಲ್ ಕಡೆ ಬಂಡುಕೋರರು ಉಡಾಯಿಸಿದ್ದಾರೆ. ಇದು ತನ್ನ ಮೊದಲ ದಾಳಿ ಎಂದು ಹಮಾಸ್ ಬಂಡುಕೋರರು ಹೇಳಿಕೊಂಡಿದ್ದಾರೆ. ಇಸ್ರೇಲ್‌ನಾದ್ಯಂತ ಎಚ್ಚರಿಕೆಯ ಸೈರನ್ ಮೊಳಗಿಸಲಾಗಿದೆ.
Another Hamas video, showing the group indeed used gliders to infiltrate Israel – a unit called “Saqr” #Israel, #Gaza pic.twitter.com/AiUJ3Lx6ea
— Michael A. Horowitz (@michaelh992) October 7, 2023
‘ಆಪರೇಷನ್ ಅಲ್-ಅಕ್ಸಾ ಫ್ಲಡ್’ ಪ್ರಾರಂಭಿಸಿದ್ದೇವೆ. 5,000 ರಾಕೆಟ್‌ಗಳನ್ನು ಹಾರಿಸಿದ್ದೇವೆ ಎಂದು ಹಮಾಸ್ ಸಶಸ್ತ್ರ ವಿಭಾಗ ಹೇಳಿಕೊಂಡಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್)ನ ಯೋಧರ ಅಪಹರಣ ಹಾಗೂ ದಕ್ಷಿಣ ಇಸ್ರೇಲ್‌ನಲ್ಲಿ ಒತ್ತೆಯಾಳಾಗಿಟ್ಟುಕೊಂಡ ಸನ್ನಿವೇಶಗಳು ಕೂಡ ವರದಿಯಾಗಿವೆ.
In response to the barrages of rockets launched by Hamas from Gaza at Israel, the IDF is currently striking Hamas targets in Gaza.
— Israel Defense Forces (@IDF) October 7, 2023
ಇಸ್ರೇಲ್‌ನಲ್ಲಿ ಒಳಗಡೆ ನುಗ್ಗಿರುವ ಹಮಾಸ್‌ನ ಬಂಡುಕೋರರು ಪ್ಯಾರಾಗ್ಲೈಡರ್‌ಗಳನ್ನು ಬಳಸಿ ದಾಳಿ ನಡೆಸುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ 2ನೇ ದೊಡ್ಡ ಯುದ್ಧ ಇದಾಗಿದೆ.
Initial Report:
Dozens of fighter jets of the Israeli Air Force are now attacking targets of the terrorist organization Hamas in the Gaza Strip in several locations, more details to follow.
— Israeli Air Force (@IAFsite) October 7, 2023
ಗಾಝಾ ಪಟ್ಟಿಯಿಂದ ಹಲವಾರು ಮಂದಿ ಇಸ್ರೇಲ್ ಪ್ರದೇಶದೊಳಗೆ ನುಸುಳಿದ್ದಾರೆ. ಗಾಜಾ ಪಟ್ಟಿಯ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ತಮ್ಮ ಮನೆಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಮಾಹಿತಿ ನೀಡಿವೆ.
Israeli tank in Hamas hands.
This is insane. pic.twitter.com/Y0b5UQqAWJ
— Hananya Naftali (@HananyaNaftali) October 7, 2023
ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿವೆ. ಈ ಹಿಂಸಾಚಾರದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭದ್ರತಾ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿದ್ದು, ಯುದ್ಧ ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
אנחנו במלחמה. pic.twitter.com/XNM3l7fEQH
— Benjamin Netanyahu – בנימין נתניהו (@netanyahu) October 7, 2023
ಈ ನಡುವೆ ಟ್ವೀಟ್ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಾವೀಗ ಯುದ್ಧದದಲ್ಲಿದ್ದೇವೆ ಎಂದು ಬರೆದುಕೊಂಡು, ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.
Israeli ambassador to the US calls “the free world to unequivocally condemn” the attacks by Hamas and support Israel’s “right to self-defence”.
🔴 LIVE updates: https://t.co/i2VdE8ofse pic.twitter.com/KtcuoK0WbZ
— Al Jazeera English (@AJEnglish) October 7, 2023
ದಾಳಿಯ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್ ರಕ್ಷಣಾ ಪಡೆಗಳು, ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ದಾಳಿಯಿಂದ ಐವರು ಇಸ್ರೇಲಿಗರು ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ಯಾಲೆಸ್ತೀನ್ ಮೇಲೆ ನಾವೂ ಕೂಡ ಪ್ರತೀಕಾರ ತೀರಿಸುತ್ತೇವೆ ಎಂದು ತಿಳಿಸಿದೆ.
Against the backdrop of a large-scale invasion of terrorists from the Gaza Strip, the Israeli army began to strike military targets in #Gaza, and the mobilization of tens of thousands of reservists was announced in #Israel. pic.twitter.com/CveclQKxHs
— Ali Hajizade (@AHajizade) October 7, 2023