ಹಮಾಸ್ ಸಂಘಟನೆ ಇಸ್ರೇಲ್ ವಿರುದ್ಧ ಯುದ್ಧ ಘೋಷಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗಾಜಾ ಪ್ರದೇಶದಲ್ಲಿ ಉಗ್ರರು ಇಸ್ರೇಲಿನ ನೂರಕ್ಕೂ ಹೆಚ್ಚು ಸೈನಿಕರು ಹಾಗೂ ನಾಗರಿಕರನ್ನು ಒತ್ತಾಯಾಳಾಗಿ ಇಟ್ಟುಕೊಂಡಿದ್ದಾರೆ.
ಹಮಾಸ್ ಗುಂಪಿನ ದಾಳಿಗಳ ಮಧ್ಯೆ ಭಾರತೀಯ ವಿದ್ಯಾರ್ಥಿಗಳು ಇಸ್ರೇಲ್ ದೇಶದಲ್ಲಿ ಸಿಲುಕಿಕೊಂಡಿದ್ದು, ಆತಂಕದಲ್ಲಿದ್ದಾರೆ. ಈ ನಡುವೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ತನ್ನ ನಾಗರಿಕರಿಗೆ ಜಾಗರೂಕರಾಗಿರಿ ಎಂದು ಸೂಚನೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಇಸ್ರೇಲ್ – ಹಮಾಸ್ ಯುದ್ಧ| 500ಕ್ಕೂ ಹೆಚ್ಚು ಸಾವು; ನಗರ ತೊರೆಯುತ್ತಿರುವ ಸ್ಥಳೀಯರು
“ನಾನು ತುಂಬಾ ಭಯಗೊಂಡಿದ್ದೇನೆ. ಅದೃಷ್ಟವಶಾತ್ ನಮಗೆ ಆಶ್ರಯ ದೊರಕಿದೆ ಹಾಗೂ ಇಸ್ರೇಲಿ ಪೊಲೀಸ್ ಪಡೆಗಳು ಹತ್ತಿರದಲ್ಲಿವೆ. ಇಲ್ಲಿಯವರೆಗೆ, ನಾವು ಸುರಕ್ಷಿತವಾಗಿದ್ದೇವೆ. ನಾವು ಭಾರತೀಯ ರಾಯಭಾರಿ ಕಚೇರಿಯ ಜನರೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ಭಾರತೀಯ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರೊಂದಿಗೆ ಸಂಪರ್ಕ ಹೊಂದಿದ್ದೇವೆ” ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ವಿದ್ಯಾರ್ಥಿ ಗೋಕುಲ್ ಮನವಾಲನ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿಯಾದ ವಿಮಲ್ ಕೃಷ್ಣಸಾಮಿ ಹಾಗೂ ಮಣಿವಣ್ಣನ್ ಚಿತ್ರಾ ಅವರು ಈ ದಾಳಿಯು “ತುಂಬಾ ಉದ್ವಿಗ್ನ ಮತ್ತು ಭಯಾನಕವಾಗಿದೆ. ಭಾರತೀಯ ರಾಯಭಾರ ಕಚೇರಿಯು ಗುಂಪಿನಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿದೆ. ಅವರು ನಮ್ಮ ಮೇಲೆ ನಿಗಾ ಇಡುತ್ತಿದ್ದಾರೆ” ಎಂದು ಹೇಳಿದ್ದಾರೆ.
— India in Israel (@indemtel) October 7, 2023
ದಾಳಿ ಪ್ರಾರಂಭವಾದ ಕ್ಷಣದಲ್ಲಿ ತನ್ನ ಪರಿಸ್ಥಿತಿಯನ್ನು ಹಂಚಿಕೊಂಡ ವಿದ್ಯಾರ್ಥಿ ಆದಿತ್ಯ ಕರುಣಾನಿತಿ ನಿವೇದಿತಾ, “ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ ಇಸ್ರೇಲ್‌ನಲ್ಲಿ ಈಗ ಧಾರ್ಮಿಕ ರಜಾದಿನಗಳು ನಡೆಯುತ್ತಿವೆ. ನಾವು ಮುಂಜಾನೆ ಸುಮಾರು 5.30ಕ್ಕೆ ಸೈರನ್‌ಗಳನ್ನು ಪಡೆದುಕೊಂಡಿದ್ದೇವೆ. ನಾವು ಸುಮಾರು 7-8 ಗಂಟೆಗಳ ಕಾಲ ಬಂಕರ್‌ಗಳಲ್ಲಿ ಇದ್ದೆವು. ಸೈರನ್‌ಗಳು ಮೊಳಗಿದ ನಂತರ ನಮ್ಮ ಮನೆಯೊಳಗೆ ಇರುವಂತೆ ತಿಳಿಸಲಾಗಿದೆ” ಎಂದರು.
ಇಸ್ರೇಲ್‌ನ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಯ ಪ್ರಕಾರ, ಅವರು ವಸತಿ ನಿಲಯಗಳಲ್ಲಿ ಉಳಿದುಕೊಂಡಿದ್ದಾರೆ ಮತ್ತು ಅವರಿಗೆ ಕಾಲೇಜಿನಿಂದ ವಸತಿ ಒದಗಿಸಲಾಗುತ್ತಿದೆ.
ಕಳೆದ 18 ವರ್ಷಗಳಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆ ಸೋಮ, “ಇಂದು ತುಂಬಾ ಕಷ್ಟಕರವಾದ ದಿನ, ನಾವು ಎಂದಿಗೂ ಪರಿಸ್ಥಿತಿಯನ್ನು ಈ ರೀತಿ ನೋಡಿಲ್ಲ. ಹಮಾಸ್ ಸಂಘಟನೆ 20 ನಿಮಿಷಗಳಲ್ಲಿ, 5,000 ರಾಕೆಟ್‌ಗಳನ್ನು ಹಾರಿಸಿ 22 ಜನರನ್ನು ಕೊಂದರು. ಇದು ದೇಶಕ್ಕೆ ಬಹಳ ಕಷ್ಟಕರವಾದ ಪರಿಸ್ಥಿತಿಯಾಗಿದೆ ” ಎಂದರು.
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಲು ವಿನಂತಿಸಲಾಗಿದೆ.
#WATCH | On Hamas terrorists' attack on Israel, an Indian student in Israel, Goku Manavalan says, "I am very nervous and scared…Thankfully we have shelter & Israeli police forces nearby. So far we are safe…We are in touch with Indian Embassy people, we have a good Indian… pic.twitter.com/tPs6pzQlMo
— ANI (@ANI) October 7, 2023
“ದಯವಿಟ್ಟು ಜಾಗರೂಕರಾಗಿರಿ, ಅನಗತ್ಯ ಚಲನವಲನವನ್ನು ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಗಳ ಹತ್ತಿರವಿರಿ” ಎಂದು ರಾಯಭಾರ ಕಚೇರಿ ಇಂಗ್ಲಿಷ್, ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತನ್ನ ಸಲಹೆಯಲ್ಲಿ ತಿಳಿಸಿದೆ.
ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿರುವ ವಿವರಗಳ ಪ್ರಕಾರ, ಇಸ್ರೇಲ್‌ನಲ್ಲಿ ವಜ್ರದ ವ್ಯಾಪಾರಿಗಳು, ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಒಳಗೊಂಡಂತೆ ಸುಮಾರು 18,000 ಭಾರತೀಯ ನಾಗರಿಕರಿದ್ದಾರೆ.