2023-24 ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪಿಎಚ್‌ಡಿ/ಎಂಫಿಲ್ ವಿದ್ಯಾರ್ಥಿಗಳ ಫೆಲೋಶಿಫ್‍ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಲ್ಪಸಂಖ್ಯಾತರ (ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಬೌದ್ಧ, ಪರ್ಶಿಯನ್) ವಿದ್ಯಾರ್ಥಿಗಳು ಸೇವಾಸಿಂಧು ಆನ್‍ಲೈನ್(ಎಸ್‌ಎಸ್‌ಪಿ) ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿದ್ದಾರೆ.
ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಖುದ್ದಾಗಿ ಅಭ್ಯರ್ಥಿಗಳೇ ಹಾಜರಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ಇವರ ಕಚೇರಿಗೆ ಸಲ್ಲಿಸಬೇಕು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಔಷಧಿ ಮಾರಾಟ ಮತ್ತು ಪ್ರಚಾರ ನೌಕರರ ರಕ್ಷಣೆಗಾಗಿ ಕಾಯ್ದೆ ಜಾರಿಗೆ ಆಗ್ರಹ
ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲಾ ನ್ಯಾಯಾಲಯದ ಎದುರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನದಲ್ಲಿ ಕಚೇರಿ ವೇಳೆ ಸಂಪರ್ಕಿಸಬಹುದಾಗಿದೆ.