ಚಿಕ್ಕಮಗಳೂರು ಜಿಲ್ಲೆ ಕಣತಿ ಗ್ರಾಮಕ್ಕೆ ಬೆಳಿಗ್ಗೆಯೇ ಆನೆಗಳು ಲಗ್ಗೆ ಇಟ್ಟಿದ್ದು, ಕಾಡಂಚಿನ ಮೂಲಕ ರಸ್ತೆ ದಾಟಿ ಬಂದಿರುವ ಈ ಆನೆಗಳು ತೋಟಗಳನ್ನು ಧ್ವಂಸ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಆರೇಳು ಕಾಡಾನೆಗಳ ಗುಂಪು ರಸ್ತೆಯಲ್ಲಿ ಸಂಚಾರ ಮಾಡುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಭಾನುವಾರ ರಾತ್ರಿಯಿಂದಲೂ ಕಣತಿ ಸುತ್ತಮುತ್ತ ಬೀಡು ಬಿಟ್ಟಿರುವ ಕಾಡಾನೆಗಳು ಬೆಳಿಗ್ಗೆ ತೋಟಗಳಿಗೆ ನುಗ್ಗಿವೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೇಂದ್ರ ಬರ ಅಧ್ಯಯನ ತಂಡದಿಂದ ಬೆಳೆ ಪರಿಶೀಲನೆ
ಈ ಭಾಗದಲ್ಲಿ ಕಾಡಾನೆಗಳ ಉಪಟಳ ಇನ್ನಷ್ಟು ಹೆಚ್ಚಳವಾಗುವ ಅಪಾಯ ಎದುರಾಗಿದೆ. ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.