ನಾವು ಯುದ್ಧವನ್ನು ಆರಂಭಿಸಿಲ್ಲ. ಆದರೆ ಇದನ್ನು ನಾವೇ ಕೊನೆಗೊಳಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆ ನೀಡಿದ್ದಾರೆ.
ಇಸ್ರೇಲ್ ಯುದ್ಧದ ಹಂತದಲ್ಲಿದೆ. ನಾವು ಈ ಯುದ್ಧವನ್ನು ಬಯಸಿರಲಿಲ್ಲ. ಆದರೆ ಅತ್ಯಂತ ಕ್ರೂರವಾಗಿ ನಮ್ಮ ಮೇಲೆ ಹೇರಲಾಯಿತು ಎಂದು ಹೇಳಿಕೆ ನೀಡಿದ್ದಾರೆ.
ನಮ್ಮ ಮೇಲೆ ರಾಕೆಟ್‌ಗಳನ್ನು ಹಾರಿಸುವ ಮೂಲಕ ಈ ಯುದ್ಧವನ್ನು ಆರಂಭಿಸಿದ್ದು ಹಮಾಸ್. ಹಾಗಾಗಿ, ಹಮಾಸ್ ಇದಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಅಲ್ಲದೇ, ದೀರ್ಘಕಾಲ ಇದರ ಆಘಾತವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದು ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ.
ಇಸ್ರೇಲ್‌ನ ಇತಿಹಾಸದಲ್ಲಿ ನಮ್ಮ ಮೇಲೆ ದಾಳಿ ಮಾಡಿ ಹಮಾಸ್ ದೊಡ್ಡ ತಪ್ಪು ಮಾಡಿದೆ. ಇದರ ಪರಿಣಾಮ ಏನು ಎಂಬುದು ಹಮಾಸ್‌ಗೆ ಶೀಘ್ರದಲ್ಲೇ ಅರಿವಾಗಲಿದೆ. ಮುಂಬರುವ ದಶಕಗಳಲ್ಲಿ ಇಸ್ರೇಲ್‌ನ ಇತರೆ ಶತ್ರುಗಳೂ ಕೂಡ ನೆನಪಿನಲ್ಲಿಟ್ಟುಕೊಳ್ಳುವಂತಹ ಬೆಲೆಯನ್ನೇ ಹಮಾಸ್ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಹೇಳಿದ್ದಾರೆ.
Israel is at war.
We didn’t want this war.
It was forced upon us in the most brutal and savage way.
But though Israel didn’t start this war, Israel will finish it.Once, the Jewish people were stateless.
Once, the Jewish people were defenseless.
No longer.Hamas will… pic.twitter.com/eVECGnzLu3
— Benjamin Netanyahu – בנימין נתניהו (@netanyahu) October 9, 2023
ಪ್ಯಾಲೆಸ್ತೀನ್‌ಗಾಗಿ ಹೋರಾಡುತ್ತಿರುವುದಾಗಿ ಹೇಳುತ್ತಿರುವ ಹಮಾಸ್, ಮಕ್ಕಳು, ಮಹಿಳೆಯರು ಸೇರಿದಂತೆ ಇಸ್ರೇಲ್ ಜನರನ್ನು ಒತ್ತೆಯಾಳುಗಳಾಗಿ ಇರಿಸಿ ಚಿತ್ರಹಿಂಸೆ ನೀಡುತ್ತದೆ. ಹತ್ಯೆಗೈಯುತ್ತಿರುವ ಶೈಲಿಯು ಐಸಿಸ್ ಉಗ್ರ ಸಂಘಟನೆಗೂ ಹಮಾಸ್‌ಗೂ ಏನು ವ್ಯತ್ಯಾಸವಿದೆ ಎಂದು ನೆತನ್ಯಾಹು ಹೋಲಿಕೆ ಮಾಡಿದ್ದಾರೆ.
ಐಸಿಸ್ ನಿರ್ಮೂಲನೆ ಮಾಡಲು ಆಧುನಿಕ ನಾಗರಿಕ ಶಕ್ತಿಗಳು ಒಗ್ಗೂಡಿದಂತೆ ಹಮಾಸ್ ನಿರ್ಮೂಲನೆ ಮಾಡಲು ಆಧುನಿಕ ನಾಗರಿಕ ಶಕ್ತಿಗಳು ಮತ್ತೆ ಒಂದಾಗಬೇಕು. ಇಸ್ರೇಲ್‌ಗೆ ಬೆಂಬಲ ನೀಡಿರುವ ಅಮೆರಿಕ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು. ಈ ಯುದ್ಧದಲ್ಲಿ ಇಸ್ರೇಲ್ ಗೆಲ್ಲಲಿದೆ. ಇಸ್ರೇಲ್‌ನೊಂದಿಗೆ ಇಡೀ ನಾಗರಿಕ ಜಗತ್ತು ಕೂಡ ಗೆಲ್ಲುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.