ಹಮಾಸ್ ಇಸ್ರೇಲ್ ಮೇಲೆ ಅನಿರೀಕ್ಷಿತ ರಾಕೆಟ್ ದಾಳಿ ನಡೆಸಿದ ಬಳಿಕ ಯುದ್ಧ ಘೋಷಿಸಿರುವ ಇಸ್ರೇಲ್, ಗಾಝಾ ಪಟ್ಟಿ ಮೇಲೆ ನಿರಂತರವಾಗಿ ಬಾಂಬ್ ಸುರಿಯುತ್ತಿದೆ. ಇದರ ಪರಿಣಾಮ ಗಾಝಾದಲ್ಲಿ ಮೂವರು ಪತ್ರಕರ್ತರು ಬಲಿಯಾಗಿರುವುದಾಗಿ ವರದಿಯಾಗಿದೆ.
ಇಸ್ರೇಲ್ ಗಾಝಾ ಮೇಲೆ ನಿರಂತರವಾಗಿ ಬಾಂಬ್ ಹಾಕುತ್ತಿರುವುದು ನಾಲ್ಕನೇ ದಿನಕ್ಕೆ ಮುಂದುವರಿದಿದೆ. ಈ ಸಂಘರ್ಷದಲ್ಲಿ ಕೊಲ್ಲಲ್ಪಟ್ಟ, ಗಾಯಗೊಂಡ ಅಥವಾ ಕಾಣೆಯಾದ ನಾಗರಿಕರಲ್ಲಿ ಪತ್ರಕರ್ತರೂ ಇದ್ದಾರೆ. ಬಾಂಬ್ ದಾಳಿಗೆ ಸ್ಥಳದಲ್ಲಿ ವರದಿ ಮಾಡುತ್ತಿದ್ದ ಮೂವರು ಪತ್ರಕರ್ತರು ಕೂಡ ಮೃತಪಟ್ಟಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.
From the farewell of the Palestinian journalists who were killed in an lsraeli airstrike in Gaza. #visa #Iran #Wars #America #غزة_تحت_القصف #طوفان_الاقصى_ #غزة_الآن #Israel #IsraelPalestineWar #Gaza #GazaUnderAttack #Israel_under_attack #حماس #حماس_الإرهابية pic.twitter.com/r06xvXOgT0
— LIFESTYLE (@Simran3863) October 10, 2023
ಮೃತಪಟ್ಟವರಲ್ಲಿ ಐನ್ ಮೀಡಿಯಾದ ಛಾಯಾಗ್ರಾಹಕ ಇಬ್ರಾಹಿಂ ಮೊಹಮ್ಮದ್ ಲಾಫಿ, ಸ್ಮಾರ್ಟ್ ಮೀಡಿಯಾದ ವರದಿಗಾರ ಮೊಹಮ್ಮದ್ ಜರ್ಘೌನ್ ಹಾಗೂ ಸ್ವತಂತ್ರ ಪತ್ರಕರ್ತ ಮೊಹಮ್ಮದ್ ಎಲ್-ಸಾಲ್ಹಿ ಅವರನ್ನು ಸೆಂಟ್ರಲ್ ಗಾಝಾ ಪಟ್ಟಿಯಲ್ಲಿ ಇಸ್ರೇಲಿ ಸೇನೆಯು ಗುಂಡಿಕ್ಕಿ ಕೊಂದಿದೆ ಎಂದು ವರದಿಯಾಗಿದೆ.
ಅಲ್ಲದೇ, ನಿರಂತರ ಬಾಂಬ್ ದಾಳಿಯ ಬಳಿಕ ಕೆಲವು ಪತ್ರಕರ್ತರು ಗಾಯಗೊಂಡಿದ್ದರೆ, ಕೆಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
BREAKING: Al Jazeera reports that several journalists have been killed in an Israeli airstrike in Gaza
— The Spectator Index (@spectatorindex) October 10, 2023
‘ಪತ್ರಕರ್ತರು, ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಬಾರದು ಎಂದು ಎರಡೂ ಕಡೆಯವರಿಗೆ ಕರೆ ನೀಡಿದ್ದೇವೆ. ಬಿಕ್ಕಟ್ಟಿನ ಸಮಯದಲ್ಲಿ ನಿಖರವಾದ ವರದಿಯು ನಿರ್ಣಾಯಕವಾಗಿದೆ. ಗಾಝಾ ಮತ್ತು ಇಸ್ರೇಲ್‌ನ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮವನ್ನು ಜಗತ್ತಿಗೆ ತೋರಿಸುವುದರಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ, ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಸಿಪಿಜೆಯ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಕಾರ್ಯಕ್ರಮ ಸಂಯೋಜಕ ಶೆರಿಫ್ ಮನ್ಸೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.