ಬೌದ್ಧ ಧಮ್ಮ ಸಂಸ್ಕೃತಿ ಜೀವಪರ ಮತ್ತು ಸಮಾನತೆ ಪರವಾಗಿದೆ. ಕತ್ತಲಿನಿಂದ ಬೆಳಕಿನಡೆ ಬರಲು ದಾರಿದೀಪವಾಗಿದೆ. ಮೈಲೂರಿನಲ್ಲಿ ಧಮ್ಮ ಸಂಸ್ಕೃತಿ ಉತ್ಸವ ಆಯೋಜಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಭಂತೆ ಜ್ಞಾನ ಸಾಗರ ಅವರು ಹೇಳಿದರು.
ಬೀದರ್‌ನ ವಿಶ್ವ ಶಾಂತಿ ಬುದ್ಧ ವಿಹಾರದಲ್ಲಿ ನಡೆದ ‘ಧಮ್ಮ ಸಂಸ್ಕೃತಿ ಉತ್ಸವ’ ಹಾಗೂ ಬುದ್ಧ ವಿಹಾರ ಸಮಿತಿಯ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಿತಿಯ ಸಲಹೆಗಾರರಾದ ಶಂಭುಲಿಂಗ ಕುದರೆ ಪ್ರಾಸ್ತಾವಿಕವಾಗಿ ಮಾತನಾಡಿ, “ಬುದ್ಧ ವಿಹಾರ ಅಭಿವೃದ್ಧಿಗಾಗಿ ಹಿರಿಯರು ಶ್ರಮಪಟ್ಟ ಪ್ರತಿಫಲವಾಗಿ ಇಂದು ವಿಹಾರ ಹೆಮ್ಮರವಾಗಿದೆ. ಹಿರಿಯರ ಶ್ರಮ ವ್ಯರ್ಥವಾಗದಂತೆ ನೂತನ ಪದಾಧಿಕಾರಿಗಳು ಮುನ್ನಡೆಸಿಕೊಂಡು ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಬೇಕೆಂದು” ಸಲಹೆ ನೀಡಿದರು.
ಇದೇ ಸಂಧರ್ಭದಲ್ಲಿ ವಿಶ್ವ ಶಾಂತಿ ಬುದ್ಧ ವಿಹಾರ ಅಭಿವೃದ್ಧಿ ಸಮಿತಿಯ ನೂತನ ಪದಾಧಿಕಾರಿಗಳಿಗೆ ಭಿಕ್ಕು ಸಂಘದಿಂದ ಪಂಚಶೀಲವನ್ನು ನೀಡಿ ಪ್ರಮಾಣ ಬೋಧಿಸಿ ವಿಹಾರಕ್ಕಾಗಿ ಶ್ರಮಪಟ್ಟ 40 ಮಹನೀಯರಿಗೆ ಸನ್ಮಾನಿಸಿದರು.
ವಿಶ್ವ ಶಾಂತಿ ಬುದ್ಧ ವಿಹಾರ ಅಭಿವೃದ್ಧಿ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ ಗೋರನಾಳಕರ್, ಸಮಿತಿಯ ಸಲಹೆಗಾರ ಜಗನಾಥ ಬಡಿಗೇರ, ಚಂದ್ರಕಲಾ ಬಡಿಗೇರ್, ಸಮಿತಿಯ ಕಾರ್ಯದರ್ಶಿ ಪ್ರಶಾಂತ ಭಾವಿಕಟ್ಟಿ ಇದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ನೀರಿನ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ದುರ್ಮರಣ
ನೂತನ ಪದಾಧಿಕಾರಿಗಳಾಗಿ ನೇಮಕ:
(ಗೌರವಾಧ್ಯಕ್ಷ) ಸಂಜುಕುಮಾರ ಮೇತ್ರೆ, (ಅಧ್ಯಕ್ಷ) ರಾಜಕುಮಾರ ಭಾವಿಕಟ್ಟಿ (ಉಪಾಧ್ಯಕ್ಷ) ಕುಶಾಲರಾವ ಬಡಿಗೇರ, (ಪ್ರಧಾನ ಕಾರ್ಯದರ್ಶಿ) ಅಮರ ಪೂಜಾರಿ (ಖಜಾಂಚಿ) ನವನಾಥ ಒಂಟೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಕಾಶ ಕುದರೆ, ಬುಧ್ದಾನಂದ ಬಡಿಗೇರ, ಸುಜೀತ ಒಂಟೆ, ಸುನೀಲ ನವಲಸಪೂರ ಅವರನ್ನು ನೇಮಕವಾಗಿದ್ದಾರೆ.