- ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ 14ನೇ ನಿರ್ದೇಶಕ ಮಂಡಳಿ ಸಭೆ
- ಸಭೆಯ ತೀರ್ಮಾನದನ್ವಯ ರೂ.18 ಕೋಟಿ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಮ್ಮ ಅಧ್ಯಕ್ಷತೆಯಲ್ಲಿ ರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ 14ನೇ ನಿರ್ದೇಶಕ ಮಂಡಳಿ ಸಭೆ ನಡೆಸಿದರು.
ಸದರಿ ಸಭೆಯಲ್ಲಿ 2023-24ನೇ ಸಾಲಿನ ನಿಗಮದ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ನವೆಂಬರ್-2023ರ ಅಂತ್ಯದೊಳಗೆ ಶೇ.100 ರಷ್ಟು ಡಿ.ಬಿ.ಟಿ. ಮಾಡಲು ಸೂಚಿಸಿದರು.
ಸದರಿ ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ದೀಪಶ್ರೀ ಕೆ. ಅವರು ನಿಗಮದಲ್ಲಿ ಮರುಪಾವತಿಯನ್ನು ಆನ್-ಲೈನ್ ಮುಖಾಂತರ ಪಡೆಯುತ್ತಿದ್ದು, ಮರುಪಾವತಿಗಾಗಿ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಸಭೆಯ ತೀರ್ಮಾನದನ್ವಯ ರೂ.18 ಕೋಟಿ ಹೆಚ್ಚುವರಿ ಅನುದಾನದ ಬೇಡಿಕೆಯನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಸಚಿವರು ತಿಳಿಸಿದರು.
ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಚ್.ಎ.ಶೋಭ, ಉಪಕಾರ್ಯದರ್ಶಿ ಎಸ್.ಎನ್.ಕಲಾವತಿ ಸಭೆಗೆ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಿದರು.