2023ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಕ್ಕಿಂತ ಕೆಳಗೆ ಕುಸಿದಿದ್ದು, 111ನೇ ಸ್ಥಾನಕ್ಕೆ ಇಳಿದಿದೆ.
ಸೂಚ್ಯಂಕದಲ್ಲಿ ನೆರೆ ರಾಷ್ಟ್ರಗಳಾದ ಪಾಕಿಸ್ತಾನ 102ನೇ ಸ್ಥಾನ, ಬಾಂಗ್ಲಾದೇಶ 81ನೇ ಸ್ಥಾನ, ನೇಪಾಳ 69ನೇ ಸ್ಥಾನ ಮತ್ತು ಶ್ರೀಲಂಕಾ 60ನೇ ಸ್ಥಾನ ಪಡೆದಿವೆ.
ಒಟ್ಟು 125 ರಾಷ್ಟ್ರಗಳನ್ನು ಒಳಗೊಂಡ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಆದರೆ ಪಟ್ಟಿಯಲ್ಲಿರುವ ದತ್ತಾಂಶಗಳನ್ನು ಕೇಂದ್ರ ಸರಕಾರ ನಿರಾಕರಿಸಿದ್ದು, ಇದು ತಿರುಚಲಾದ ಮಾಹಿತಿಯಿಂದ ಕೂಡಿದೆ ಎಂದು ಆರೋಪಿಸಿದೆ. 2022ನೇ ಸಾಲಿನಲ್ಲಿ 121 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 107ನೇ ಸ್ಥಾನದಲ್ಲಿತ್ತು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ: ಮನೆ ಮುಂದೆ ನೀರು ಚೆಲ್ಲಬೇಡಿ ಎಂದದ್ದಕ್ಕೆ ದಲಿತ ವ್ಯಕ್ತಿಯ ಗುಂಡಿಕ್ಕಿ ಕೊಲೆ
ಹಸಿವು ಸೂಚ್ಯಂಕದಲ್ಲಿ ಭಾರತ 28.7 ಅಂಕ ಪಡೆದಿದೆ. ಇದು ಗಂಭೀರ ಮಟ್ಟದ ಹಸಿವನ್ನು ಸೂಚಿಸುತ್ತದೆ. ಇನ್ನು ದೇಶದಲ್ಲಿ ನ್ಯೂನಪೋಷಣೆ ಪ್ರಮಾಣ ಶೇ 16.6ರಷ್ಟಿದೆ. ಐದು ವರ್ಷಕ್ಕಿಂತ ಒಳಗಿನವರ ಮರಣ ಪ್ರಮಾಣ ಶೇ 3.1 ಇದೆ. 15 ರಿಂದ 24 ವರ್ಷದ ಒಳಗಿನ ಮಹಿಳೆಯರಲ್ಲಿನ ಅನೀಮಿಯಾ ಸಮಸ್ಯೆ ಶೇ 58.1ರಷ್ಟಿದೆ ಎಂದು ವರದಿಯಲ್ಲಿ ತಿಳಿಸಿದೆ.
ಇದಲ್ಲದೇ ಹಸಿವು ಸೂಚ್ಯಂಕ ವರದಿಯಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ಕುರಿತು ಅಂಕಿ-ಅಂಶ ನೀಡಲಾಗಿದೆ. ಇದರಲ್ಲಿ ಭಾರತದಲ್ಲಿ ಅತ್ಯಧಿಕ ಪ್ರಮಾಣ, ಅಂದರೆ ಶೇ 18.7 ದಾಖಲಾಗಿದೆ. ಈ ಮೂಲಕ ಭಾರತದ ಮಕ್ಕಳ ಎತ್ತರ ಮತ್ತು ತೂಕದ ಹೋಲಿಕೆಯಲ್ಲಿ ‘ಅಪೌಷ್ಟಿಕತೆ’ ಮಿತಿ ಮೀರುತ್ತಿರುವುದಾಗಿ ಆತಂಕ ವ್ಯಕ್ತವಾಗಿದೆ.
ಇದಲ್ಲದೆ, 2017 ರಿಂದ, ಜಾಗತಿಕ ಹಸಿವು ಸೂಚ್ಯಂಕ ಅಂಕಗಳ ಲೆಕ್ಕಾಚಾರದಲ್ಲಿ ಬಳಸುವ ಸೂಚಕಗಳಲ್ಲಿ ಒಂದಾದ ಅಪೌಷ್ಟಿಕತೆಯ ಹರಡುವಿಕೆಯು ಹೆಚ್ಚುತ್ತಿದೆ. ಅಪೌಷ್ಟಿಕತೆಯ ಸಂಖ್ಯೆಯು 572 ಮಿಲಿಯನ್‌ನಿಂದ ಸುಮಾರು 735 ಮಿಲಿಯನ್‌ಗೆ ಏರಿದೆ ಎಂದು ಸೂಚ್ಯಂಕ ವರದಿ ಹೇಳಿದೆ.
Global hunger remains too high, and progress on reducing hunger
has largely stalled. According to projections of the 2023 Global Hunger Index, at the current pace, 58 countries will not achieve low hunger by 2030. #GHI2023Full Report: https://t.co/asRGvqYemH pic.twitter.com/IpQyDkSbIm
— Welthungerhilfe (WHH) (@Welthungerhilfe) October 12, 2023