- ‘ಐಟಿ ರೇಡ್ ನಡೆಯೋದೆ ರಾಜಕೀಯ ಉದ್ದೇಶಕ್ಕೆ’
- ‘ಗುತ್ತಿಗೆದಾರರ ಸಂಘದ ಕೆಂಪಣ್ಣ ಗಾಬರಿಪಡುವ ಅಗತ್ಯವಿಲ್ಲ’
ಐಟಿ ದಾಳಿ ಬಗ್ಗೆ ನನಗೆ ಇನ್ನು ಪೂರ್ಣ ಮಾಹಿತಿ ಸಿಕ್ಕಿಲ್ಲ. ಬಿಜೆಪಿಯವರು ಇರೋ ಕಡೆ ಎಂದಾದರೂ ಐಟಿ ದಾಳಿ ಆಗಿದೆಯಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಐಟಿ ರೇಡ್ ನಡೆಯೋದೆ ರಾಜಕೀಯ ಉದ್ದೇಶಕ್ಕೆ, ಬಿಜೆಪಿ ಇರೋ ಕಡೆ ಐಟಿ ರೇಡ್ ಆಗಲ್ಲ, ಬೇರೆ ಕಡೆಗಳಲ್ಲಿ ಆಗುತ್ತದೆ ಎನ್ನುವ ಮೂಲಕ ಗುತ್ತಿಗೆದಾರರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿರುವ ಪ್ರಕರಣಕ್ಕೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬೊಟ್ಟು ಮಾಡಿದರು.
ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಮಾಡಿರುವ ರಾಜ್ಯ ಕಲೆಕ್ಷನ್ ಸೆಂಟರ್ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, “ಎಲ್ಲಿ, ಯಾರಿಗೆ ಆಯ್ತೋ ನನಗೆ ಗೊತ್ತಿಲ್ಲ, ರಸ್ತೆ, ಬೀದಿಯಲ್ಲಿ ಮಾತಾಡೋರಿಗೆಲ್ಲ ಉತ್ತರ ಕೊಡುವ ಅವಶ್ಯಕತೆ ಇಲ್ಲ” ಎಂದು ತಿರುಗೇಟು ನೀಡಿದರು.
ಗುತ್ತಿಗೆದಾರರ ಶೇ. 65ರಿಂದ 70ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ತನಿಖೆ ಪೆಂಡಿಂಗ್ ಇದ್ದರೂ ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಾಬರಿಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಗುತ್ತಿಗೆದಾರರಿಗೆ ಸಹಾಯ ಆಗಬೇಕು ಅಂತಾ ಆದೇಶ ಮಾಡಿದ್ದೇವೆ. ಸೀನಿಯಾರಿಟಿ ಮೇಲೆ ಬಿಲ್ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗುತ್ತಿಗೆದಾರರ 20 ಸಾವಿರ ಕೋಟಿ ಬಿಲ್ ಬಾಕಿ; ಸರ್ಕಾರಕ್ಕೆ 30 ದಿನಗಳ ಗಡುವು ನೀಡಿದ ಡಿ.ಕೆಂಪಣ್ಣ
ಲೋಡ್ ಶೆಡ್ಡಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, “ಯಾರ ಯಾರ ಅವಧಿಯಲ್ಲಿ ಎಷ್ಟು ಪವರ್ ಜನರೇಟ್ ಆಗ್ತಿತ್ತು ಅಂತ ಮಾಹಿತಿ ಇದೆ. ನಾನಿದ್ದಾಗ ಎಷ್ಟಿತ್ತು? ಎಷ್ಟು ಎಕ್ಸಿಸ್ ಇತ್ತು ಏನು ಪ್ರಿಪರೇಷನ್ ಇತ್ತು ಗೊತ್ತಿದೆ. ಬಿಜೆಪಿಯವರ ಆರೋಪಗಳು ಕೇವಲ ರಾಜಕೀಯ” ಎಂದು ಬಿಜೆಪಿಗೆ ಟಾಂಗ್ ನೀಡಿದರು.