ಇಸ್ರೇಲ್ ಸೇನೆಯು ಗಾಝಾ ಮತ್ತು ಲೆಬನಾನ್ ವಿರುದ್ಧದ ಕಾರ್ಯಾಚರಣೆಗಳ ವೇಳೆ ಬಿಳಿ ರಂಜಕ ಬಾಂಬ್ಗಳನ್ನು ಬಳಸಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಆರೋಪಿಸಿದೆ.
ಈ ಬಗ್ಗೆ ವಿಡಿಯೋ ದಾಖಲೆಗಳನ್ನು ಹಂಚಿಕೊಂಡು ಆರೋಪಿಸಿರುವ ಹ್ಯೂಮನ್ ರೈಟ್ಸ್ ವಾಚ್, ಬಿಳಿ ರಂಜಕ ಬಾಂಬ್ನಂತಹ ಅಸ್ತ್ರಗಳ ಬಳಕೆಯಿಂದ ನಾಗರಿಕರ ಮೇಲೆ ಹೆಚ್ಚು ಅಪಾಯ ಉಂಟು ಮಾಡುತ್ತದೆ ಹಾಗೂ ದೀರ್ಘಕಾಲಿಕ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ತಿಳಿಸಿದೆ.
ಅ.10ರಂದು ಲೆಬನಾನ್ನಲ್ಲಿ ಹಾಗೂ ಅ.11ರಂದು ಗಾಝಾದಲ್ಲಿ ತೆಗೆಯಲಾದ ವಿಡಿಯೋಗಳನ್ನು ತಾನು ಪರಿಶೀಲಿಸಿರುವುದಾಗಿ ಹೇಳಿರುವ ಹ್ಯೂಮನ್ ರೈಟ್ಸ್ ವಾಚ್, ಬಿಳಿ ರಂಜಕ ಹೊಂದಿದ ಹಲವು ಶಸ್ತ್ರಗಳ ಬಳಕೆ ನೋಡಿದ್ದೇವೆ. ವೀಡಿಯೋಗಳಲ್ಲಿ ಗಾಝಾ ನಗರ ಬಂದರು ಮತ್ತು ಇಸ್ರೇಲ್-ಲೆಬನಾನ್ ಗಡಿಯ ಭಾಗದ ಎರಡು ಗ್ರಾಮೀಣ ಭಾಗಗಳಲ್ಲಿ ಇದನ್ನು ಇಸ್ರೇಲ್ ಬಳಸಿದೆ.
Evidence from the ground, including eye witness reports from Palestinians in Gaza, and numerous photos and videos like the one below, strongly indicate apartheid Israel is using white phosphorus in heavily populated civilian areas in Gaza.#GazaUnderAttack#StopIsraeliGenocide… pic.twitter.com/zFw5Fv0opa
— Aliii (@imvillain99) October 13, 2023
ಆದರೆ ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಮಿಲಿಟರಿ, ಪ್ರಸ್ತುತ ಗಾಝಾದಲ್ಲಿ ಬಿಳಿ ರಂಜಕ ಹೊಂದಿದ ಶಸ್ತ್ರಾಸ್ತ್ರಗಳನ್ನು ಬಳಸಿದ ಬಗ್ಗೆ ತಿಳಿದಿಲ್ಲ ಎಂದು ಹೇಳಿದೆ. ಆದರೆ ಬಿಳಿ ರಂಜಕವನ್ನು ಲೆಬನಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಲಾಗಿದೆಯೇ ಎಂಬ ಪ್ರಶ್ನೆಗೆ ಇಸ್ರೇಲ್ ಮಿಲಿಟರಿ ಉತ್ತರಿಸಿಲ್ಲ.
Visuals of Israeli airstrikes using internationally prohibited white phosphorus bombs in bombing the #Gaza Port.#PalestineUnderAttack #FreePalastine #GazaUnderAttack#Palestine #Israel #طوفان_الاقصى_ pic.twitter.com/qwX0qUPfB0
— Sheikh Nabeel (@SheikhNabeel786) October 11, 2023
ಈ ವೀಡಿಯೋಗಳ ಲಿಂಕ್ ಅನ್ನೂ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ಎರಡೂ ವೀಡಿಯೋಗಳು ಇಸ್ರೇಲ್-ಲೆಬನಾನ್ ಗಡಿ ಪ್ರದೇಶದ್ದಾಗಿದ್ದರೆ ಗಾಝಾದಲ್ಲಿನ ವೀಡಿಯೋವನ್ನು ಒದಗಿಸಿಲ್ಲ. ಆದರೆ ಪ್ಯಾಲೆಸ್ತೀನಿ ಟಿವಿ ವಾಹಿನಿಗಳು ಇತ್ತೀಚೆಗೆ ಪ್ರಸಾರ ಮಾಡಿದ ವಿಡಿಯೋಗಳಲ್ಲಿ ಆಗಸದಲ್ಲಿ ತೆಳುವಾದ ಬಿಳಿ ಹೊಗೆ ಗಾಝಾದಲ್ಲಿ ಕಾಣಿಸುತ್ತದೆ ಹಾಗೂ ಇವು ಬಿಳಿ ರಂಜಕ ಎಂದು ತಿಳಿಸಿವೆ.
Human Rights Watch has determined based on verified video and witness accounts that Israeli forces used white phosphorus in military operations in Lebanon and Gaza on October 10 and 11, 2023, respectively.
New Q&A:https://t.co/1py96nOh1k
— Human Rights Watch (@hrw) October 13, 2023
ಈ ಬಗ್ಗೆ ‘ಅಲ್ ಜಝೀರಾ’ದೊಂದಿಗೆ ಮಾತನಾಡಿರುವ ಹ್ಯೂಮನ್ ರೈಟ್ಸ್ ವಾಚ್ನ ಅಹ್ಮದ್ ಬೆಂಚೆಮ್ಸಿ, ‘ಬಿಳಿ ರಂಜಕವು ಸ್ಮೋಕ್ಸ್ಕ್ರೀನ್ ಸೃಷ್ಟಿಸುತ್ತವೆ. ಗುರಿಗಳನ್ನು ಗುರುತಿಸಲು, ಬಂಕರ್ ಮತ್ತು ಕಟ್ಟಡಗಳನ್ನು ಸುಟ್ಟು ಹಾಕಲು ಬಳಕೆಯಾಗುತ್ತವೆ. ಆದರೆ ಇಸ್ರೇಲ್ ನಾಗರಿಕರ ಮೇಲೆ ಹೆಚ್ಚು ಅಪಾಯ ಉಂಟು ಮಾಡಲೆಂದೇ ಇದನ್ನು ಬಳಸಿದೆ. ಇದು ಮನುಷ್ಯನ ಮೇಲೆ ಬಿದ್ದರೆ ಆತನ ದೇಹವೇ ಕರಗಿ ಬಿಡಬಹುದು. ಇದು ಅಂತಾರಾಷ್ಟ್ರೀಯ ನಿಯಮಗಳಡಿ ನಿಷೇಧವಿದೆ. ಆದರೂ ಅದನ್ನು ಬಳಸಲಾಗಿದೆ’ ಎಂದು ತಿಳಿಸಿದ್ದಾರೆ.
ಇಸ್ರೇಲ್ನ ಮಿಲಿಟರಿ ತಾನು 2008-2009ರಲ್ಲಿ ಗಾಝಾದಲ್ಲಿ ಬಳಸಿದ್ದ ಬಿಳಿ ರಂಜಕ ಸ್ಮೋಕ್ಸ್ಕ್ರೀನ್ ಅಸ್ತ್ರಗಳನ್ನು ಕೈಬಿಡುವುದಾಗಿ 2013ರಲ್ಲಿ ತಿಳಿಸಿತ್ತು.