ರಾಯಚೂರು | ಒಂದೇ ಕುಟುಂಬದ ವಶದಲ್ಲಿ ಬಡವರ ಭೂಮಿ; ಅ.17ಕ್ಕೆ ರಸ್ತೆ ತಡೆ ಪ್ರತಿಭಟನೆ

Date:

Advertisements

ಸಿಂಧನೂರು ತಾಲೂಕಿನ ಜವಳಗೇರಾದಲ್ಲಿ ನಾಡಗೌಡರ ಕುಟುಂಬದ ವಶದಲ್ಲಿರುವ ಸರ್ಕಾರಿ ಭೂಮಿಯನ್ನು ಭೂ ರಹಿತರಿಗೆ ವಿತರಿಸಬೇಕೆಂದು ಒತ್ತಾಯಿಸಿ ಅಕ್ಟೋಬರ್‌ 17ರಂದು ಸಿಂಧನೂರಿನಲ್ಲಿ ರಸ್ತೆ ತಡೆ ನಡೆಸುವುದಾಗಿ ‘ಸಿಪಿಐ(ಎಂಎಲ್) ರೆಡ್‌ಸ್ಟಾರ್ ಪಾಲಿಟ್ ಬ್ಯುರೋ’ ಸದಸ್ಯ ಆರ್. ಮಾನಸಯ್ಯ ಹೇಳಿದ್ದಾರೆ.

ಅಕ್ಟೋಬರ್‌ 13ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೆ ನಂ.419 ಮತ್ತು ಸುಲ್ತಾನಪುರ ಸರ್ವೆ ನಂ. 186ರಲ್ಲಿರುವ,  187 ರಲ್ಲಿ 62.37 ಎಕರೆ ಹೆಚ್ಚುವರಿ ಭೂಮಿಯೂ, ಸರ್ಕಾರಿ ಭೂಮಿ ಎಂದು ದಾಖಲೆಯಲ್ಲಿ ನಮೂದಾಗಿದೆ. ಆದರೂ, ರಾಜಶೇಖರ ನಾಡಗೌಡ ಹಾಗೂ ಚಂದ್ರಭೂಪಾಲ ನಾಡಗೌಡ ಇವರು ಅಕ್ರಮ ಸಾಗುವಳಿ ಮಾಡುತ್ತಿದ್ದಾರೆ. ಆದರೂ, ಕಂದಾಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಸರ್ಕಾರಿ ಭೂಮಿಯನ್ನು ಭೂ ರಹಿತರಿಗೆ ಹಂಚಿಕೆ ಮಾಡಲು ಸಿಪಿಐ(ಎಂಎಲ್) ರೆಡ್ ಸ್ಟಾರ್ ಮತ್ತು ಕರ್ನಾಟಕ ರೈತ ಸಂಘ ಹೋರಾಟ ನಡೆಸುತ್ತಲೇ ಬಂದಿವೆ.

ಕಳೆದ ಆರು ದಿನಗಳಿಂದ ಸರ್ವೆ ನಂ 419ರಲ್ಲಿ ಅಹೋರಾತ್ರಿ ಧರಣ ನಡೆಸುತ್ತಿದ್ದೇವೆ. ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರರು ಮತ್ತು ಲಿಂಗಸೂಗೂರು ಸಹಾಯಕ ಆಯುಕ್ತರು, ಅಕ್ರಮವಾಗಿ ಭೂಮಾಲೀಕರೆಂದು ಹೇಳಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ, ವಿಸ್ತೃತ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರೂ, ಜಿಲ್ಲಾಧಿಕಾರಿಗಳು ಸರ್ಕಾರಿ ಭೂಮಿ ಉಳಿಸಲು ಮುಂದಾಗುತ್ತಿಲ್ಲ.

1974ರಲ್ಲಿ, ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೊಂಡಿದೆ. ನಾಡಗೌಡರ ಕುಟುಂಬಕ್ಕೆ ಸೇರಿದ 4,900 ಎಕರೆ ಭೂಮಿಯಿದೆ. ಅವರ ಕುಟುಂಬದವರೇ ಘೋಷಿಸಿಕೊಂಡಂತೆ, ಘೋಷಣಾ ಪತ್ರಗಳು ಕಂದಾಯ ಇಲಾಖೆಯಲ್ಲಿವೆ. ರಾಮರಾವ್, ಸೂರ್ಯನಾರಾಯಣರಾವ್, ಸಿದ್ದಲಿಂಗಮ್ಮ ಸೇರಿದಂತೆ ಒಂಬತ್ತು ಕುಟುಂಬದವರ ಘೋಷಣಾ ಪತ್ರಗಳಿವೆ. ಆದರೆ, ಸಿದ್ದಲಿಂಗಮ್ಮ ಗಂಡ ವೆಂಕಟರಾವ್ ಹೆಸರಿನಲ್ಲಿ 1123 ಎಕರೆ 32 ಗುಂಟೆ ಜಮೀನು ಇದೆ. ಇವರಿಗೆ ಮಕ್ಕಳಿಲ್ಲ. ಇವರ ಘೋಷಣೆ ಮೇರಗೆ 1981 ನವಂಬರ್ 05ರಂದು, ತಾಲೂಕ ಭೂ ನ್ಯಾಯಮಂಡಳಿ ವಿಚಾರಣೆ ನಡೆಸಿ 1,069 ಎಕರೆ 32 ಗುಂಟೆ ಹೆಚ್ಚುವರಿ ಜಮೀನು ಎಂದು ತೀರ್ಪು ನೀಡಿದೆ.

ನಾಲ್ಕು ತಿಂಗಳಲ್ಲಿ ಭೂಮಿಯನ್ನು ಕಂದಾಯ ಇಲಾಖೆ ಸ್ವಾಧೀನಕ್ಕೆ ಪಡೆದು, ಸರ್ಕಾರಿ ಭೂಮಿ ಎಂದು ನಮೂದಿಸಲಾಗಿದೆ. ಆದರೆ, ಭೂಮಿ ಕಬ್ಜ ಮಾತ್ರ ಜಮೀನದಾರರ ಕೈಯೊಳಗೆ, ಇಂದಿಗೂ ಇದೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಭೂ ಸುಧಾರಣೆ ಕಾಯ್ದೆಯ ವಾರಸುದಾರರು ಎಂದು ಹೇಳಿಕೊಳ್ಳುತ್ತಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನವ ದೇವರಾಜ ಅರಸು ಎಂದು ಸಹ ಹೇಳಲಾಗುತ್ತಿದೆ. ಸಿಂಧನೂರಿನಲ್ಲಿ, ಭೂ ಸುಧಾರಣೆ ಕಾಯ್ದೆಯನ್ನು ಬುಡಮೇಲು ಮಾಡಿದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅವರು ಟೀಕಿಸಿದರು.

1981ರಿಂದ 2022ವರೆಗೆ, ಭೂ ನ್ಯಾಯ ಮಂಡಳಿಯೂ ಪ್ರಶ್ನಿಸಿಲ್ಲ. ಅಲ್ಲದೇ, ಸಹಾಯಕ ಆಯುಕ್ತರು, ತಹಸೀಲ್ದಾರರು ಸೇರಿದಂತೆ, ಕಂದಾಯ ಇಲಾಖೆ ಸರ್ಕಾರಿ ಭೂಮಿ ಉಳಿಸಿ, ಭೂ ರಹಿತರಿಗೆ ಹಂಚಿಕೆ ಮಾಡದೇ ಇರುವದರಿಂದ, ಬಹುದೊಡ್ಡ ಹಗರಣವಿದ್ದ ಕಂದಾಯ ಸಚಿವರು ತನಿಖೆಗೆ ಆದೇಶಿಸಬೇಕೆಂದರು. ಕಳೆದ 40 ವರ್ಷಗಳಿಂದ ಸರ್ಕಾರಿ ಭೂಮಿಯನ್ನು, ಮಾಜಿ ಭೂ ಮಾಲೀಕರಿಗೆ ಬಿಟ್ಟು ಕೊಟ್ಟ ಅಧಿಕಾರಿಗಳ ವಿರುದ್ದ ತನಿಖೆಯಾಗಬೇಕು. ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಯಲ್ಲಿದೆ ಎಂಬದನ್ನು ಸ್ಪಷ್ಟಪಡಿಸಿ, ಸಿಂಧನೂರು ಶಾಸಕರು ಸರ್ಕಾರ ಮೇಲೆ ಒತ್ತಡಹಾಕಿ ತನಿಖೆಗೆ ಒತ್ತಾಯಿಸಬೇಕೆಂದು ಆಗ್ರಹಿಸಿದರು.

ಕಾನೂನು ಬಾಹಿರವಾಗಿ ಸರ್ಕಾರಿ ಭೂಮಿ ಬಳಸುತ್ತಿರುವವರ ವಿರುದ್ದ, ಕೇಸ್ ದಾಖಲಿಸಬೇಕು ಎಂದಿರುವ ಅವರು, ಭೂ  ರಹಿತರಿಗೆ ಭೂಮಿ ಹಂಚಿಕೆ ಮಾಡಬೇಕೆಂದು ನಡೆಯಲಿರುವ ರಸ್ತೆ ತಡೆಯಲ್ಲಿ, ಸರ್ಕಾರಿ ಭೂಮಿ ಉಳಿಸಬೇಕೆನ್ನುವ ಆಶಯ ಹೊಂದಿರುವ ಸಂಘಟನೆಗಳು, ಬೆಂಬಲಿಸಿ ಭಾಗವಹಿಸಲು ಮನವಿ ಮಾಡಿದರು.

ಈ ಸಂದರ್ಬದಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಅಮೀರ್ ಅಲಿ, ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಗಂಗಾಧರ, ಹುಚ್ಚಾರೆಡ್ಡಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X