ಗದಗ | ಆರ್‌ಎಸ್‌ಎಸ್‌ನ ʼಹಿಂದೂ ರಾಷ್ಟ್ರʼ ಬಲೂನಿಗೆ ಜಾತಿಗಣತಿ ಸೂಜಿ ಚುಚ್ಚಿದೆ; ಮಾವಳ್ಳಿ ಶಂಕರ್

Date:

Advertisements

ಜನಗಣತಿ ಮೂಲಕ ರಾಜ್ಯದ ಜನತೆಗೆ ಸ್ಪಷ್ಟತೆ ಸಿಗುತ್ತದೆ. ಬ್ರಾಹ್ಮಣರು ಜನಸಂಖ್ಯೆ ಮೀರಿ ಹೇಗೆ ಅಧಿಕಾರ ಹಿಡಿಯುತ್ತಿದ್ದಾರೆ. ಇದರಿಂದ ದಲಿತರಿಗೆ, ಹಿಂದುಳಿದ ಸಮುದಾಯಗಳಿಗೆ ಸಾಕಷ್ಟು ಅನ್ಯಾಯವಾಗಿದೆ. ಹಾಗಾಗಿ ದಲಿತ ಚಳುವಳಿ ಮತ್ತೆ ಕಟ್ಟಬೇಕಿದೆ. ಅಂದು ಹೋರಾಡಿದ ಮಹನೀಯರ ಹೋರಾಟ ವ್ಯರ್ಥಮಾಡದೆ, ಎಲ್ಲರೂ ಚಳವಳಿಯಲ್ಲಿ ತೊಡಗಿಸಿಕೊಳ್ಳಿ ಎಂದು ಮಾವಳ್ಳಿ ಶಂಕರ್ ಕರೆ ಕೊಟ್ಟಿದ್ದಾರೆ.

ಗದಗ ಪಟ್ಟಣದ ಬಸವೇಶ್ವರ ಸಭಾ ಭವನನದಲ್ಲಿ ದಲಿತ ಸಂಘರ್ಷ ಸಮಿತಿಯು 67ನೇ ಧರ್ಮಚಕ್ರ ಪ್ರವರ್ತನ ದಿನಾಚರಣೆ ಮತ್ತು ಬೆಳಗಾವಿ ವಿಭಾಗ ಮಟ್ಟದ ಸಭೆಯನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಿಎಸ್ಎಸ್ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಒಂದು ಕಾಲದಲ್ಲಿ ದಲಿತರ ಮೇಲೆ ಹಲ್ಲೆ, ಅನ್ಯಾಯ, ಅಸ್ಪೃಶ್ಯತೆ ಸಹಜವಾಗಿತ್ತು. ಅನ್ಯಾಯಗಳ ವಿರುದ್ಧ, ಧೈರ್ಯ ತುಂಬಿದ ಸಾಕಷ್ಟು ಮಹನೀಯರಿಂದ, ಜನರು ದಲಿತ ಚಳವಳಿಗಳಲ್ಲಿ ತೊಡಗಿಸಿಕೊಂಡರು. ದಲಿತ ಚಳವಳಿಗಾಗಿ ರಕ್ತವನ್ನು ಹರಿಸಿದರು. ದಲಿತ ಸಮುದಾಯದ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಲು ಅನೇಕ ಚಳವಳಿಗಳನ್ನು ರೂಪಿಸಿಕೊಂಡು, ರಾಜಕೀಯ ಪ್ರಜ್ಞೆ ಬೆಳೆಸಲು ʼಇಂಡಿಪೆಂಡೆಂಟ್ ಲೇಬರ್ ಪಾರ್ಟಿʼಯನ್ನು ಅಂಬೇಡ್ಕರ್ ಅವರು ಸ್ಥಾಪಿಸಿದರು” ಎಂದರು.

Advertisements

“ʼಧರ್ಮೋ ರಕ್ಷತಿ ರಕ್ಷಿತಃʼ ಎನ್ನುವುದನ್ನು ಈಗ ಬದಲಾಯಿಸಿ, ʼಸಂವಿಧಾನ ರಕ್ಷತಿ ರಕ್ಷತಿಃʼ  ಆಗಬೇಕು. ಸಂವಿಧಾನವನ್ನು ರಕ್ಷಣೆ ಮಾಡಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಹಿಂದೂ ಧರ್ಮದ ಕೊಳಕು ಬಟ್ಟೆಯನ್ನು ಕಳಚಿ, ಶಾಂತಿಯ ಬೌದ್ಧ ಬಟ್ಟೆಯನ್ನು ಧರಿಸಬೇಕಿದೆ” ಎಂದು ಕರೆ ನೀಡಿದರು.

“ಮೋದಿ, ಶಾ ಜಾತಿಗಣತಿ ಮಾಡುವುದನ್ನು ವಿರೋಧಿಸುತ್ತಿದ್ದಾರೆ. ಯಾಕಂದ್ರೆ, ಆರ್‌ಎಸ್‌ಎಸ್ ಎರಡು ಸಾವಿರ ಇಪ್ಪತೈದಕ್ಕೆ ಹಿಂದೂ ರಾಷ್ಟ ಮಾಡ ಹೊರಟಿದ್ದ ಬಲೂನಿಗೆ, ಜಾತಿ ಗಣತಿ ಸೂಜಿ ಚುಚ್ಚಿದೆ” ಎಂದು ಮಾವಳ್ಳಿ ಶಂಕರ್ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕಾಲೆಳೆದರು.

ಕಾರ್ಯಕ್ರಮದಲ್ಲಿ ದಲಿತ ಕಲಾ ಮಂಡಳಿಯ ಮುಖಂಡ ಶರೀಫ್ ಬಿಳಿಯಲಿ ಮಾತನಾಡಿ, “ಬಿ.ಆರ್. ಅಂಬೇಡ್ಕರ್ ಅವರು, ಲಕ್ಷಾಂತರ ಜನರೊಂದಿಗೆ ಭೌದ್ದ ಧರ್ಮ ಸ್ವೀಕರಿಸಿದರು. ನಂತರ ಲಕ್ಷಾಂತರ ಜನರು ಸ್ವ ಪ್ರೇರಣೆಯಿಂದ, ಬೌದ್ದ ಧರ್ಮವನ್ನು ಸ್ವಿಕಾರ ಮಾಡಿ ಬುದ್ದನ ಕಡೆ ಸಾಗಿದರು. ನಾವು ಕೂಡ ಭೌದ್ದ ಧರ್ಮವನ್ನು ಸ್ವೀಕಾರ ಮಾಡಲಿಕ್ಕೆ ತಯಾರಾಗಬೇಕು” ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನ ಪೂರ್ವ ಪೀಠಿಕೆ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಡಿಎಸ್ಎಸ್ ಹಿರಿಯ ಮುಖಂಡ ಎಚ್. ಡಿ. ಪೂಜಾರ, ಸಿದ್ದಣ್ಣ ಕಾಂಬಳೆ, ಬಾಗಲಕೋಟೆ ಜಿಲ್ಲಾ ಡಿಎಸ್ಎಸ್ ಮುಖಂಡ ಯುವರಾಜ ಬಂಡಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X