ದಕ್ಷಿಣ ಕನ್ನಡ | ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Date:

Advertisements

ನೌಷಾದ್ ಹಾಜಿ ಸೂರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್  ವತಿಯಿಂದ ಲೈಫ್ ಲೈನ್ ಹೆಲ್ತ್‌ ಕೇರ್ ಪ್ಲಸ್ ಇವರ ಸಹಯೋಗದೊಂದಿಗೆ ಅ.15ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಮಾದಕ ವ್ಯಸನದ ವಿರುದ್ಧ ಜಾಗೃತಿ ಕಾರ್ಯಕ್ರಮ ಮತ್ತು ಹಿರಿಯ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಗುರುಪುರ ಕೈಕಂಬದಲ್ಲಿರುವ ಅಲ್-ಬಿ‌ರ್ರ್ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಧಾರ್ಮಿಕ ಗುರುಗಳಾದ ಜಮಾಲುದ್ದೀನ್ ದಾರಿಮಿ  ದುವಾ ಮಾಡುವ ಮೂಲಕ ಚಾಲನೆ ನೀಡಿದರು.

ಉಚಿತ ಆರೋಗ್ಯ ಶಿಬಿರ

ದಾರುಸ್ಸಲಾಂ ಅಧ್ಯಕ್ಷ ಸಯ್ಯದ್ ಝೈನುಲ್ ಆಬಿದೀನ್ ಜೆಫ್ರಿ ತಂಙಳ್ ಮಾತನಾಡಿ, “ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿಡುವರ ಸೇವೆ ಮತ್ತು ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸ್ಮರಣೆ ಸಂಚಿಕೆಯನ್ನು ರಚಿಸಬೇಕು” ಎಂದರು.

Advertisements

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜನಾಬ್ ಇನಾಯತ್ ಅಲಿ ಮುಲ್ಕಿ ಮಾತನಾಡಿ, “ನೌಷಾದ್ ಹಾಜಿಯವರ ಸವಿ ನೆನಪಿಗಾಗಿ ಅವರ ಹೆಸರಿನಲ್ಲಿ ಒಂದು ಸ್ಮಾರಕ ಭವನವನ್ನು ನಿರ್ಮಿಸಬೇಕು” ಎಂದು ಸಲಹೆ ನೀಡಿದರು.

ಮಂಗಳೂರು

ಈ ಸಂದರ್ಭದಲ್ಲಿ ಸಮಾಜಕ್ಕೆ ಅರ್ಪೂವ ಸೇವೆ ಸಲ್ಲಿಸಿದ ಡಾ. ಕೆ ಸುಂದರ್ ಭಟ್, ಡಾ ರಮೇಶ್ ಮಲ್ಲಿ, ಡಾ ನಾಸಿರ್ ಹುಸೈನ್ ಕಿಲ್ಪಾಡಿ, ಡಾ. ಶ್ರೀಪತಿ ಕಿನ್ನಿಕಂಬಳ ಈ ನಾಲ್ವರು ಹಿರಿಯ ವೈದ್ಯರು ಮತ್ತು ರಫೀಕ್ ಮಾಸ್ಟರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಮಾದಕ ವ್ಯಸನವನ್ನು ತಡೆಗಟ್ಟುವ ಕುರಿತು ರಫೀಕ್ ಮಾಸ್ಟರ್ ಮಾಹಿತಿ ನೀಡಿದರು.

ಈ ಶಿಬಿರದಲ್ಲಿ ಹಲವು ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಿದ್ದರು. ಚರ್ಮ ರೋಗ, ಮೂಳೆ ಎಲುಬು, ಕಣ್ಣು, ಕಿವಿ ಮೂಗು ಹಾಗೂ ಗಂಟಲು ರೋಗ, ಮಕ್ಕಳ ರೋಗ, ಮಾನಸಿಕ ಕಾಯಿಲೆ, ಕ್ಯಾನ್ಸರ್ ರೋಗ, ಸಾಮಾನ್ಯ ರೋಗ, ನರ ರೋಗ, ಎದೆ ರೋಗ ಹೀಗೆ ವಿವಿಧ ವಿಭಾಗಗಳ ತಜ್ಞ ವೈದ್ಯರಿಂದ ತಪಾಸಣೆ ನಡೆಯಿತು. ಅಗತ್ಯ ಇದ್ದವರಿಗೆ ಉಚಿತವಾಗಿ ಇಸಿಜಿ, ಮದುಮೇಹ ಮತ್ತು ರಕ್ತದೊತ್ತಡ ತಪಾಸಣೆ ಮಾಡಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಬ್ಯಾಂಕ್ ದರೋಡೆಗೆ ಯತ್ನ; ಸೆಕ್ಯೂರಿಟಿ ಗಾರ್ಡ್‌ಗೆ ಇರಿದ ದುಷ್ಕರ್ಮಿಗಳು

ಸುಮಾರು 488 ಮಂದಿ ಈ ಶಿಬಿರದ ಪ್ರಯೋಜನೆ ಪಡೆದುಕೊಂಡಿದ್ದು, ಆರ್ಥಿಕವಾಗಿ ಹಿಂದುಳಿದ ಅಗತ್ಯ ಉಳ್ಳವರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ದ.ಕ ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯನ್ ಅಧ್ಯಕ್ಷ ಎಂ ಎಚ್ ಮೊಹಿದಿನ್ ಹಾಜಿ ಅಡ್ಡೂರು, ಜಲ್ಲಾ ಪಂಚಾಯತ್ ಮಾಜಿ ಸದಸ್ಯ ಯು ಪಿ ಇಬ್ರಾಹಿಂ ಅಡ್ಡೂರು, ಉಸ್ಮಾನ್ ಹಾಜಿ ಏರ್ ಇಂಡಿಯಾ ಕೋಶಾಧಿಕಾರಿ ದಾರುನ್ನೂರು ಕಾಶಿಪಟ್ನ, ಡೆಕ್ಕನ್ ಪ್ಲಾಸ್ಟ್ ಮಾಲಕರು ಅಸ್ಕರ್ ಅಲಿ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X