ದುರುಳ ಪತಿಯೊಬ್ಬ ತನ್ನ ಪತ್ನಿ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.
30 ವರ್ಷದ ನಂದಿನಿ ಹತ್ಯೆಗೀಡಾದ ಮಹಿಳೆ. ಕೌಟುಂಬಿಕ ಕಲಹದಿಂದಾಗಿ ಆಕೆಯನ್ನು ಆರೋಪಿ ಪತಿ ಲೋಕೇಶ ನಾಯ್ಕ ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ.
ನಂದಿನಿ – ಲೋಕೇಶ ನಾಯ್ಕ ಹಾಗೂ ಇಬ್ಬರು ಮಕ್ಕಳು ಸಬ್ಬತ್ತಿ ಕ್ರಾಸ್ ಬಳಿ ವಾಸಿಸುತ್ತಿದ್ದರು. ಇಬ್ಬರು ನಡುವೆ ಜಗಳ ನಡೆದಿದ್ದು, ನಂದಿನಿಯ ಗುತ್ತಿಗೆಗೆ ಆರೋಪಿ ಮಾರಕಾಸ್ತ್ರದಿಂದ ಹೊಡೆದಿದ್ದಾನೆ. ನಂದಿನಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳೀಯರು ಪೊಲೀಸರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.