ಭಾರತದಲ್ಲಿ ಕಲ್ಲಿದ್ದಲು ಬೆಲೆ ಏರಿಕೆಯಾಗುತ್ತಿದ್ದು, ಅದಾನಿ ಕಂಪನಿ ವಿದ್ಯುತ್ ಬೆಲೆ ಹೆಚ್ಚಿಸುವ ಮೂಲಕ ದೇಶದ ಜನರನ್ನು ನೇರವಾಗಿ ಲೂಟಿ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅದಾನಿ ಸಮೂಹ ಕಲ್ಲಿದ್ದಲನ್ನು ಆಮದು ಮಾಡಿಕೊಂಡು ಅತಿಯಾಗಿ ಇನ್ವಾಯ್ಸ್(ಸರಕುಪಟ್ಟಿ) ಹೆಚ್ಚಿಸಿದೆ. ಇದರ 12,000 ಕೋಟಿ ರೂಪಾಯಿಗಳಷ್ಟು ಹೊರೆಯನ್ನು ವಿದ್ಯುತ್ ದರ ಏರಿಸುವ ಮೂಲಕ ಜನರನ್ನು ವಂಚಿಸಲಾಗಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಉಲ್ಲೇಖಿಸಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ”ಪ್ರಧಾನಿ ಈ ವಿಷಯದ ಬಗ್ಗೆ ಏಕೆ ಮೌನವಾಗಿದ್ದಾರೆ? ನಾನು ಪ್ರಧಾನಿಗೆ ಸಹಾಯ ಮಾಡುತ್ತಿದ್ದೇನೆ. ತನಿಖೆಯನ್ನು ಪ್ರಾರಂಭಿಸುವ ಮೂಲಕ ಮತ್ತು ಅವರ ವಿಶ್ವಾಸಾರ್ಹತೆಯನ್ನು ರಕ್ಷಿಸಲು ಕೇಳುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಂಶ ರಾಜಕಾರಣ ಆರೋಪಕ್ಕೆ ತಿರುಗೇಟು ನೀಡಿದ ರಾಹುಲ್ ಗಾಂಧಿ
ಅದಾನಿ ಸಮೂಹ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಶತಕೋಟಿ ಡಾಲರ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ ಎಂದು ತೋರುತ್ತದೆ. ಫೈನಾನ್ಶಿಯಲ್ ಟೈಮ್ಸ್ ವರದಿಯ ಪ್ರಕಾರ ಅದಾನಿ ಕಲ್ಲಿದ್ದಲು ಆಮದುಗಳನ್ನು ಹೆಚ್ಚು ಇನ್ವಾಯ್ಸ್ ಮಾಡಿ “ಜನರ ಜೇಬಿನಿಂದ” 12,000 ಕೋಟಿ ರೂಪಾಯಿಗಳನ್ನು ಕಬಳಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
अडानी जी का कोयला इंडोनेशिया से भारत पहुंचते-पहुंचते ₹12,000 करोड़ महंगा हो जाता है!
ये पैसा अडानी जी, बिजली बिल बढ़ा कर, आपकी जेब से, खुले आम चोरी कर रहे हैं।
और वो चोरी से डरते क्यों नहीं? क्योंकि प्रधानमंत्री खुद उनकी रक्षा कर रहे हैं! pic.twitter.com/JTB303OiW0
— Rahul Gandhi (@RahulGandhi) October 18, 2023
“ಅದಾನಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಖರೀದಿಸಿದ್ದಾರೆ ಮತ್ತು ಅದು ಭಾರತಕ್ಕೆ ಬಂದಾಗ ಅದರ ಬೆಲೆ ದ್ವಿಗುಣಗೊಂಡಿದೆ. ಕಲ್ಲಿದ್ದಲಿನ ಈ ಮಿತಿಮೀರಿದ ಇನ್ವಾಯ್ಸ್ ದೇಶದಲ್ಲಿನ ವಿದ್ಯುತ್ ದರಗಳ ಮೇಲೆ ಪ್ರಭಾವ ಬೀರುತ್ತಿದೆ. ಗ್ರಾಹಕರು ಹೆಚ್ಚಿನ ವಿದ್ಯುತ್ ಬಿಲ್ಗಳನ್ನು ಪಾವತಿಸಲು ಕಾರಣವಾಗುತ್ತದೆ. ಈ ಹಗರಣವು ಜಗತ್ತಿನ ಯಾವುದೇ ಸರ್ಕಾರವನ್ನು ಪತನಗೊಳಿಸಬಹುದು ಆದರೆ ಭಾರತದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ” ಎಂದು ರಾಹುಲ್ ಹೇಳಿದರು.
“ಅದಾನಿಗೆ ಸರ್ಕಾರದ ಸಂಪೂರ್ಣ ರಕ್ಷಣೆ ಇದೆ, ಅವರ ಹಿಂದೆ ಯಾವ ಶಕ್ತಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ರಾಹುಲ್ ಹೇಳಿದರು.