ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಿಬ್ಬಂದಿಗಳನ್ನು ಮಾನವ ಸಂಪನ್ಮೂಲ ಏಜೆನ್ಸಿ ಟೆಂಡರ್ ಈಗಾಗಲೇ ಕರೆಯಲಾಗಿದ್ದು, ಸದರಿ ಟೆಂಡರ್ ನಲ್ಲಿ ಹಲವು ಲೋಪ ದೋಷಗಳಿದ್ದು, ಕೂಡಲೇ ಈ ಟೆಂಡರ್ ರದ್ದುಪಡಿಸಿ, ಮರು ಟೆಂಡರ್ ಕರೆಯುವಂತೆ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಆಗ್ರಹಿಸಿದೆ.
ಈ ಕುರಿತು ಕರ್ನಾಟಕ ನಿರ್ಮಾಣ ಸೇನೆಯ ಸಂಸ್ಥಾಪಕ ಸ್ವಾಮಿದಾಸ ಕೆಂಪೇನೋರ ನೇತೃತ್ವದಲ್ಲಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ತಮ್ಮ ಸಂಸ್ಥೆಯಲ್ಲಿ ಅಕ್ರಮ ಮತ್ತು ನಿಯಮ ಬಾಹಿರವಾಗಿ ನೇಮಿಸಿರುವ ಬಾಲಾಜಿ ಹುಗ್ಗೆ ಮತ್ತು ರಾಜಕುಮಾರ ಅವರನ್ನು ಸೇವೆಯಿಂದ ಕೈಬೀಡಬೇಕು. ದಿಲೀಪ ಡೊಂಗ್ರೆ (ಎಲೇಕ್ಟ್ರಿಷನ್ ) ಸುಮಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಾ, ರಾಜಕೀಯ ಮಾಡುತ್ತಿದ್ದು, ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಹೊರಗುತ್ತಿಗೆ ಕಾರ್ಮಿಕರನ್ನು ಕೆ.ಟಿ.ಪಿ.ಪಿ ನಿಯಮದಂತೆ ಟೆಂಡರ್ ಮೂಲಕ ನೇಮಕ ಮಾಡಿಕೊಳ್ಳುವಂತೆ” ಆಗ್ರಹಿಸಿದರು.
ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿಆರೋಗ್ಯ ಸಚಿವರಿಗೆ ಘೇರಾವ್ ಹಾಕಿ ಹಕ್ಕೋತ್ತಾಯ ಮನವಿ ಸಲ್ಲಿಸಲಾಗುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | 82ರ ಇಳಿ ವಯಸ್ಸಿನಲ್ಲೂ ಆರದ ಉತ್ಸಾಹ; ಸ್ವತಃ ಖರ್ಚಿನಲ್ಲೇ ಊರಿನ ರಸ್ತೆ ದುರಸ್ತಿ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನವೀನ ಅಲ್ಲಾಪೂರ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಂಗಮೇಶ ಏಣಕೂರ, ಶಿವರಾಜ ಹಮೀಲಾಪೂರ, ಸಂಜುಕುಮಾರ ಶ್ರೀಮಂಡಲ, ಸುಧಾಕರ ಢೋಣೆ, ಡಾ. ಜೇಮ್ಸ್, ಸುಶೀಲಕುಮಾರ ಕೆಂಪೇನೋರ, ನರಸಿಂಗ್ ಮಿರ್ಜಾಪೂರ ಇದ್ದರು.