ಯಾದಗಿರಿ | ಎಲ್ಲ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಆಗ್ರಹ

Date:

Advertisements

ಯಾದಗಿರಿ ಜಿಲ್ಲೆಯ ಕೆಲವು ತಾಲೂಕುಗಳನ್ನು ಮಾತ್ರ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ಆ ಪಟ್ಟಿಯನ್ನು ಕೈಬಿಟ್ಟು ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡತವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಸುರಪುರ ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಲಭಾವಿ ಮಾತನಾಡಿ, “ಈಗಾಗಲೇ ಜನರಿಂದಲೇ ಸಂಪೂರ್ಣವಾಗಿ ಬಹುಮತ ಪಡೆದು ನೂತನ ಸರ್ಕಾರ ರಚನೆಯಾಗಿದ್ದು, ಜನರ ಹಿತ ಕಾಯಬೇಕಾಗಿರುವುದು ಆಡಳಿತ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಎರಡ್ಮೂರು ವರ್ಷಗಳಿಂದ ರೈತರು, ಕೂಲಿ ಕಾರ್ಮಿಕರು ಮತ್ತು ದುಡಿಯುವ ವರ್ಗದವರ ಬದುಕು ಚಿಂತಾಜನಕವಾಗಿದೆ. ಸಕಾಲಕ್ಕೆ ಸರಿಯಾಗಿ ಮಳೆ ಬಾರದೆ ಅಲ್ಪ-ಸ್ವಲ್ಪ ಮಳೆ ಬಂದಿದ್ದರಿಂದ ರೈತರು ಸಾಲ ಸೂಲ ಮಾಡಿ ಬೀಜ ಬಿತ್ತಿದ್ದಾರೆ. ಆದರೆ ಮಳೆ ಬರದೆ ಅದೂ ಕೂಡಾ ಸಂಪೂರ್ಣ ಒಣಗಿ ಹೋಗಿದೆ” ಎಂದರು.

Advertisements

ರೈತರು ಸಾಲಸೋಲ ಮಾಡಿ ಬೆಳೆಗೆ ಗೊಬ್ಬರ, ಆಳುಗಳಿಗೆ ಕೂಲಿ ಸೇರಿದಂತೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ ಮಳೆ ಬಾರದೆ ಇರುವುದರಿಂದ ರೈತರು ಆತ್ಮಹತ್ಯೆಗೆ ಶರಣಾಗುವಂತಹ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಶೇಂಗಾ ಬೀಜ, ಗೊಬ್ಬರ, ಕೀಟನಾಶಕಗಳ ದರ ಗಗನಕ್ಕೇರಿದೆ. ಆದರೆ ಮೂರು ವರ್ಷಗಳಿಂದ ರೈತರು ಹಾಕಿರುವ ಬಂಡವಾಳವೇ ಸರಿಯಾಗಿ ಕೈಗೆ ಬಾರದಂತಾಗಿದೆ. ಈ ವರ್ಷ ಅಲ್ಲಸ್ವಲ್ಪ ಬೆಳೆದಿರುವಂತ ಹತ್ತಿ, ಶೇಂಗಾ, ತೊಗರಿ ಬೆಳೆಗೆ ಸರಿಯಾಗಿ ಬೆಲೆ ಇಲ್ಲದೇ ರೈತರು ಕಷ್ಟದಲ್ಲಿ ಜೀವನ ಕಳೆಯುತ್ತಿದ್ದಾರೆ. ರೈತರು ಬೆಳೆದಂತಹ ಬೆಳೆಗೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುವುದರ ಜತೆಗೆ ವೈಜ್ಞಾನಿಕ ಬೆಲೆಗೆ ಖರೀದಿ ಮಾಡಬೇಕು” ಎಂದು ಆಗ್ರಹಿಸಿದರು.

“ನೆಪ ಮಾತ್ರಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಾಗಿರಬಹುದು ಮತ್ತು ಸಹಕಾರ ಬ್ಯಾಂಕಗಳಾಗಿರಬಹುದು ರೈತರಿಗೆ ಸಾಲ ಕೊಡುವುದರಲ್ಲಿ, ಹಲವಾರು ತಾರತಮ್ಯ ಮಾಡಿದ್ದಾರೆ. ಸಹಕಾರ ಬ್ಯಾಂಕ್‌ಗಳಲ್ಲಿ ಈಗಾಗಲೇ 3 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಕೊಡುತ್ತೇವೆಂದು ಹೇಳಿಕೆಯಲ್ಲಿ ಮಾತ್ರ ಇದೆ. ಆದರೆ ಹೊಸದಾಗಿ ಮೆಂಬರ್ ಆಗಿರುವ ಸದಸ್ಯರಿಗೆ ಸಾಲ ನೀಡಿಲ್ಲ. ಅಲ್ಲದೆ ಈವರೆಗೆ ಯಾರಿಗೂ 3 ಲಕ್ಷ ರೂ. ಸಾಲ ನೀಡಿಲ್ಲ” ಎಂದು ಆರೋಪಿಸಿದರು.

“ಯಾದಗಿರಿ ಜಿಲ್ಲಾದ್ಯಂತ ಶಿಕ್ಷಕರು ವರ್ಗಾವಣೆಗೊಂಡು ಹುದ್ದೆಗಳು ಖಾಲಿಯಾಗಿ ಮಕ್ಕಳ ಶಿಕ್ಷಣದ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ‘ಕಲ್ಯಾಣ ಕರ್ನಾಟಕ ಈಗಾಗಲೇ ಶಿಕ್ಷಣದಿಂದ ವಂಚಿತಗೊಂಡಿದ್ದು, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇವುಗಳನ್ನು ಕೇವಲ ಕಲ್ಯಾಣ ಕರ್ನಾಟದಲ್ಲಿ ಮತ್ತು ಕಲ್ಯಾಣ ಕರ್ನಾಟಕದ ಮೀಸಲಾತಿ ಅಡಿಯಲ್ಲಿ ತುರ್ತಾಗಿ ಶಿಕ್ಷಕರ ಹುದ್ದೆಗೆ ಕೂಡಲೇ ಭರ್ತಿ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದರು.

“7 ತಾಸು ವಿದ್ಯುತ್ ನೀಡಿದರೂ ಕೂಡ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಸಾಕಾಗುತ್ತಿಲ್ಲ. ಇಂತಹದರಲ್ಲಿ 2 ತಾಸು ಕಡಿತಗೊಳಿಸಿ, 5 ತಾಸು ವಿದ್ಯುತ್ ಕೊಡುತ್ತೇವೆಂದು ಸರ್ಕಾರ ಆದೇಶ ಮಾಡಿರುವುದನ್ನು ಹಿಂಪಡೆದು ಮೊದಲಿನಂತೆ 7 ತಾಸು 3 ಫೇಸ್ ವಿದ್ಯುತ್ ನೀಡಿದರೆ ನೀರಾವರಿ ಮೂಲಕ ಬೆಳೆ ಮಾಡಿಕೊಂಡಿರುವ ರೈತರ ಜಮೀನಿಗೆ ಪಂಪಸೆಟ್ ಮೂಲಕ ನೀರು ಹಾಯಿಸಲು ಅನುಕೂಲವಾಗುತ್ತದೆ. ಇಲ್ಲವಾದರೆ ಬೆಳೆಗಳು ಒಣಗುತ್ತವೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಮ್ಮ ನಿಲುವನ್ನು ಬದಲಾಯಿಸಿಕೊಂಡು 7 ತಾಸು ವಿದ್ಯುತ್ ನೀಡಬೇಕು” ಎಂದು ಒತ್ತಾಯಿಸಿದರು.

“ಈಗಾಗಲೇ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿದ್ದು, ಟೆಂಡರ್ ಕರೆದರು ಆ ಕೆಲಸಗಳನ್ನು ತಕ್ಷಣವೇ ಪ್ರಾರಂಭಿಸಬೇಕು ಮತ್ತು ಇನ್ನು ಟೆಂಡರ್ ಆಗದೆ ಬಾಕಿ ಉಳಿದಿರುವ ಕೆಲಸವನ್ನು ತಕ್ಷೆಣವೇ ಪ್ರಾರಂಭ ಮಾಡಬೇಕು.

“ರೈತರು ಈಗಾಗಲೇ ಅಲ್ಪಸ್ವಲ್ಪ ಹತ್ತಿ ಬೆಳೆ ಬೆಳೆದಿದ್ದು, ಅದಕ್ಕೆ ಪೂರಕವಾದ ಬೆಲೆ ಇಲ್ಲ. ಈ ಕುರಿತು ರೈತ ಸಂಘ ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಕೇಂದ್ರ ಸರ್ಕಾರ ಘೋಷಣೆ ಮಾಡಿರುವಂತ ಬೆಂಬಲ ಬೆಲೆ ಮುಖಾಂತರ ಖರೀದಿ ಕೇಂದ್ರಗಳನ್ನು ತೆರೆದು ಖರೀದಿಸುವಂತೆ ಒತ್ತಾಯಿಸಬೆಂದು ಮನವಿ ಮಾಡಿದರೂ ಈವರೆಗೆ ಯಾವುದೇ ಕ್ರಮ ನಡೆದಿಲ್ಲ. ಈಗಲಾದರೂ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಬೆಂಬಲ ಬೆಲೆ ಮುಖಾಂತರ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ವಿದ್ಯುತ್ ವಿತರಣಾ ಘಟಕಕ್ಕೆ ಮೊಸಳೆ ಬಿಟ್ಟು ರೈತರ ಆಕ್ರೋಶ

ಈ ವೇಳೆ ಅಯ್ಯಣ್ಣ ಹಾಲಬಾವಿ, ಹಣಮಂತ್ರಾಯ ಚಂದಲಾಪೂರ, ಶಿವನಗೌಡ ರುಕ್ಕಾಪೂರ, ಭೀಮಣ್ಣ ತಿಪ್ಪನಟಗಿ, ವೆಂಕಟೇಶ್ ಗೌಡ ಕುಪಗಲ್, ತಿಪ್ಪಣ್ಣ ಜಂಪಾ, ದೇವಣ್ಣ ಎರಕಿಹಾಳ, ಲೋಹಿತ್ ಕುಮಾರ್ ಮುಂಗಿಹಾಳ, ನಾಗಪ್ಪ ಕುಪಗಲ,‌ ಖುದಾಭಕ್ಷ, ಮಾನಪ್ಪ ಕೊಂಬಿನ್, ಮಲ್ಲಣ್ಣ ಹಲಭಾವಿ, ರಾಮು ಕರ್ನಾಳ, ಸಿದಪ್ಪ, ರಂಗಯ್ಯ ಬೂದುರ್, ಶಿವಲಿಂಗಪ್ಪ, ಹಣಮಂತ ಬಂದೇಸಾಬ್ ಕರ್ನಾಳ, ಅಂಬರೀಷ್, ಬಸಣ್ಣ, ಭೀಮಯ್ಯ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X