ಕಾರು ಕಳ್ಳತನ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಈ ಮೂಲಕ 8 ಪ್ರಕರಣಗಳನ್ನು ಭೇದಿಸಿದ್ದಾರೆ.
ಕೋಲಾರದ ನಹ್ಮದ್ ತುಲಕ್ (22), ಗೋವಿಂದಪುರ ನಿವಾಸಿಗಳಾದ ಅಸ್ರಾನ್ ಅಹಮದ್ (20), ಸೈಯದ್ ಫರ್ಜಾನ್ (20), ಸೈಯದ್ ಶಫಿ (25) ಮತ್ತು ಸೈಫ್ ಉಲ್ಲಾಕ್ (23) ಬಂಧಿತರು.
ಆರೋಪಿಗಳಿಂದ ಒಟ್ಟು ₹17.5 ಲಕ್ಷ ಮೌಲ್ಯದ ಕಾರು ಹಾಗೂ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 5 ರಂದು ಶ್ರೀರಾಂಪುರದಲ್ಲಿರುವ ತನ್ನ ಕಚೇರಿಯ ಹೊರಗೆ ನಿಲ್ಲಿಸಿದ್ದ ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಈ ಸಂಬಂಧ ಐವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗುತ್ತಿಗೆದಾರನನ್ನು ಕಿಡ್ನ್ಯಾಪ್ ಮಾಡಿ ₹3 ಕೋಟಿ ಚೆಕ್ ಪಡೆದ ಬಿಬಿಎಂಪಿ ಮಾಜಿ ಕಾರ್ಪೋರೇಟರ್
ಇವರ ಬಂಧನದೊಂದಿಗೆ ಅಮೃತಹಳ್ಳಿ, ಬಾಣಸವಾಡಿ, ಮಹದೇವಪುರ ಮತ್ತು ಯಲಹಂಕ ಠಾಣೆಗಳಲ್ಲಿ ವರದಿಯಾಗಿದ್ದ ಆರು ದರೋಡೆ ಪ್ರಕರಣಗಳು ಸೇರಿದಂತೆ ಎಂಟು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.