ಯುವತಿಯರು ಮಧ್ಯರಾತ್ರಿಯಲ್ಲಿ ಮದ್ಯ ಸೇವನೆ ಮಾಡಿ ರಂಪಾಟ ಮಾಡಿದ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಅ.19 ರಂದು ತಡರಾತ್ರಿ ಕೋರಮಂಗಲದಲ್ಲಿರುವ ಡ್ರಂಕನ್ ಡ್ಯಾಡ್ ಪಬ್ ಮುಂದೆ ಕೆಲವು ಯುವತಿಯರು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ನಿಂತು ರಂಪಾಟ ಮಾಡಿದ್ದಾರೆ.
ಯುವತಿಯರು ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ. ಓರ್ವ ಯುವತಿ ರಸ್ತೆಯಲ್ಲಿ ತೆರಳುತ್ತಿದ್ದ ಕಾರ್ ಬಾನೆಟ್ ಮೇಲೆ ಕುಳಿತು ಕೂಗಾಡಿದ್ದಾಳೆ. ಇದರಿಂದ ಕೆಲಕಾಲ ಜನರಿಗೆ ಕಿರಿಕಿರಿ ಉಂಟಾಯಿತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಂಚಾರ ದಟ್ಟಣೆಗೆ ನಮ್ಮ ಮೆಟ್ರೋ ಮದ್ದು; ನಿತ್ಯ 7 ಲಕ್ಷ ಪ್ರಯಾಣಿಕರ ಓಡಾಟ
ಸ್ಥಳೀಯರು ಕೋರಮಂಗಲ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯರನ್ನು ಠಾಣೆಗೆ ಕರೆದುಕೊಂಡು ಹೋಗಿ ಮತ್ತೆ ಈ ರೀತಿ ಘಟನೆ ಮರುಕಳಿಸದಂತೆ ನೋಡಿಕ್ಕೊಳ್ಳಲು ಎಚ್ಚರಿಕೆ ನೀಡಿದ್ದಾರೆ.