ಯಾದಗಿರಿ ಜಿಲ್ಲಾದ್ಯಂತ ಅಕ್ಟೋಬರ್ 24ರಂದು ರಾವಣ ದಹನ ಕಾರ್ಯಕ್ರಮ ಆಚರಣೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
“ಯಾದಗಿರಿ ಜಿಲ್ಲೆಯಲ್ಲಿ ಪ್ರತಿ ವರ್ಷ ವಿಜಯದಶಮಿಯಂದು ರಾವಣ ದಹನ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದ್ದು, ರಾವಣ ಕೂಡ ಒಬ್ಬ ಅಸುರನಾಗಿದ್ದು, ಮೂಲ ನಿವಾಸಿ ಬಹುಜನರು ರಾವಣನ್ನು ಭಕ್ತಿ ಭಾವದಿಂದ ನೋಡುತ್ತಾರೆ” ಎಂದು ದಸಂಸ ಕಾರ್ಯಕರ್ತರು ಹೇಳಿದರು.
“ರಾವಣ ಈ ದೇಶದ ಒಬ್ಬ ಮೂಲ ನಿವಾಸಿ ಹಾಗೂ ರಾಜನಾಗಿದ್ದು, ರಾವಣ ದಹನ ಮಾಡುವುದರಿಂದ ಮೂಲ ನಿವಾಸಿ ಬಹುಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಜತೆಗೆ ಆ ಸಂದರ್ಭದಲ್ಲಿ ವಿಪರೀತ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ಉಂಟಾಗುತ್ತದೆ” ಎಂದರು.
“ರಾವಣ ದಹನ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪಟಾಕಿ ಮತ್ತು ಉರಿಯುವ ಬೆಂಕಿಯಿಂದ ಅಗ್ನಿ ಅನಾಹುತವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ರಾವಣ ದಹನ ಕಾರ್ಯಕ್ರಮ ರದ್ದುಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಕೈಬಿಡದಿದ್ದರೆ ಪ್ರತಿಭಟನೆ ಸ್ವರೂಪ ತೀವ್ರ: ಕೆಪಿಆರ್‌ಎಸ್ ಯಶವಂತ್
ಈ ವೇಳೆ ಮರೆಪ್ಪ ಚಟ್ಟೇರಕರ್, ವೀರಭದ್ರಪ್ಪ ಯಡ್ಡಳ್ಳಿ, ಗೋಪಾಲ ತೆಳಗೇರಿ, ಕಾಶೀನಾಥ್ ನಟೇಕಾರ, ಪ್ರಭು ಬುಕ್ಕಲ್, ಮಲ್ಲಿನಾಥ್ ಸುಂಗಲಕರ್, ನಿಂಗಪ್ಪ ಬೀರನಾಳ, ಚಂದಪ್ಪ ಮುನಿಯಪ್ಪನೋರ್, ಸೈದಪ್ಪ ಕೂಲೂರಕರ್, ಸಾಯಬಣ್ಣ ನಟೇಕಾರ್ ಇದ್ದರು.