ಈಜಲು ಹೋಗಿ ಇಬ್ಬರು ಯುವಕರು ನೀರುಪಾಲಾದ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಹೊರವಲಯದ ಫಾತ್ಮಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಖಾಜಾ ಯುಸೂಫ್ (19) ಹಾಗೂ ಸೈಯದ್ ಸಮೀರ್ (20) ಎಂಬ ಇಬ್ಬರು ಮೃತರು.
ಕೆಂಪು ಕಲ್ಲು ಕ್ವಾರಿಯಲ್ಲಿ ಈಜಲು ಇಳಿದಿದ್ದ ಓರ್ವ ಯುವಕ ಹೊಂಡದಲ್ಲಿ ಮುಳುಗುವಾಗ ಇನ್ನೋರ್ವ ಯುವಕ ರಕ್ಷಿಸಲು ಮುಂದಾಗಿದ್ದು, ಈತನೂ ನೀರುಪಾಲಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಇಬ್ಬರ ಮೃತದೇಹ ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಈ ಕುರಿತು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.