ರಾಜ್ಯ ರಾಜಧಾನಿ ಬೆಂಗಳೂರಿನ ದೊಡ್ಡ ನಾಗಮಂಗಲದ ವೀರಭದ್ರಸ್ವಾಮಿ ಲೇಔಟ್‌ನ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬರೋಬ್ಬರಿ ₹2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ನೈಜೀರಿಯಾ ಪ್ರಜೆ ವಿಕ್ಟರ್ ಒಬಿನ್ನಾ ಚುಕ್ವುಡಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 2 ಕೆ.ಜಿ 43 ಗ್ರಾಂ ಎಂಡಿಎಂಎ ಡ್ರಗ್ಸ್, ಎರಡು ಮೊಬೈಲ್, ತೂಕದ ಯಂತ್ರ ಜಪ್ತಿ ಮಾಡಿದ್ದಾರೆ.
ಆರೋಪಿ ವಿಕ್ಟರ್ ಹಲವು ವರ್ಷಗಳ ಹಿಂದೆಯೇ ದೆಹಲಿಯಿಂದ ಬೆಂಗಳೂರಿಗೆ ಬಂದು ನೆಲೆಸಿದ್ದನು. ನಗರದ ವೀರಭದ್ರಸ್ವಾಮಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದನು. ನೈಜೀರಿಯಾದ ಪೆಡ್ಲರ್ ಮೆಸ್ಸೊ ಎಂಬಾತ ದೆಹಲಿಯಲ್ಲಿ ನೆಲೆಸಿದ್ದಾನೆ.
ದೆಹಲಿಯಲ್ಲಿರುವ ಮೆಸ್ಸೋ ಜತೆಗೆ ಆರೋಪಿ ವಿಕ್ಟರ್ ಒಡನಾಟ ಇಟ್ಟುಕೊಂಡಿದ್ದನು. ಆತನ ಕಡೆಯಿಂದ ಡ್ರಗ್ಸ್ ತರಿಸುತ್ತಿದ್ದನು. ಆಮದು ಮಾಡಿಕೊಂಡ ಡ್ರಗ್ಸ್ ಅನ್ನು ತಾನು ನೆಲೆಸಿರುವ ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದನು. ಬಳಿಕ ತಾನೇ ಮನೆಯಲ್ಲಿ ಡ್ರಗ್ಸ್‌ಗಳನ್ನು ಪೊಟ್ಟಣಗಳಲ್ಲಿ ತುಂಬಿ ಪ್ಯಾಕ್ ಮಾಡಿ, ಮಾರಾಟ ಮಾಡುತ್ತಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಾಲ್ಕು ತಿಂಗಳು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂ ಕ್ಷನ್ ಫ್ಲೈಓವರ್ ಬಂದ್!
ಈತನು ನಗರದಲ್ಲಿ ನಡೆಯುವ ಹಲವು ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿ ವಿಕ್ಟರ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಮೆಸ್ಸೊ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.