ನವರಾತ್ರಿ ಸಂಭ್ರಮದಲ್ಲಿ ವೇಷಧಾರಿಯೋರ್ವ ಯಕ್ಷಗಾನದ ವೇಷ ಹಾಕಿದ್ದ ಕಾರಣಕ್ಕೆ ಆತನನ್ನು ನಿಂಧಿಸಿ, ವೇಷ ಕಳಚುವಂತೆ ಹಿರಿಯ ಕಲಾವಿದರೊಬ್ಬರು ಒತ್ತಡ ಹಾಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.
ದಾವಣಗೆರೆ ಮೂಲಕ ವ್ಯಕ್ತಿಯೊಬ್ಬರು ಯಕ್ಷಗಾನ ವೇಷ ಧರಿಸಿ ಮಂಗಳುರಿನ ಬಿಸಿ ರೋಡ್‌ನ ದೇವಾಲಯದ ಬಳಿಕ ತೆರಳುತ್ತಿದ್ದರು. ಅವರನ್ನು ತಡೆದ ಹಿರಿಯ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ವೇಷವನ್ನು ಕಳಚುವಂತೆ ಹೇಳಿದ್ದಾರೆ. ಘಟನೆಯ ವಿಡಿಯೋ ವೈರಲ್ ಅಗಿದೆ.
ಯಕ್ಷಗಾನವನ್ನು ನಾವು ಪೂಜೆ ಮಾಡುತ್ತೇವೆ. ನಿನಗೆ ಗೊತ್ತುಂಟಾ..? ನೀನು ವೇಷ ಹಾಕಿ ಭಿಕ್ಷೆ ಬೇಡುತ್ತಿಯಾ ಎಂದು ಪ್ರಶ್ನಿಸಿದ್ದಾರೆ.
ನಾನು ತಪ್ಪು ಮಾಡಿದ್ದರೆ ನನಗೆ ಹೊಡೆಯಿರಿ ಎಂದು ವೇಷಧಾರಿ ಹೇಳಿದಾಗ ಹೊಡೆಯುವುದು ಅಲ್ಲ, ವೇಷ ತೆಗೆಯದಿದ್ದಲ್ಲಿ ಕೈ ಕಾಲು ಮುರಿದು ಹಾಕುತ್ತೇವೆಂದು ಅಶೋಕ್ ಶೆಟ್ಟಿ ಬೆದರಿಕೆ ಹಾಕಿದ್ದಾರೆ.
ಯಕ್ಷಗಾನ ವೇಷ ಧರಿಸಿದ್ದಕ್ಕೆ ಕಲಾವಿದನಿಗೆ ಬೆದರಿಕೆ pic.twitter.com/uboYvb8G2N
— Somashekar chalya (@Somashekarkvs) October 23, 2023