ಮೈಸೂರು | ದಸರಾ ಜಂಬೂಸವಾರಿ; 49 ಸ್ತಬ್ಧ ಚಿತ್ರಗಳ ಪ್ರದರ್ಶನ

Date:

Advertisements

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯಲ್ಲಿಈ ಬಾರಿ ರಾಜ್ಯದ ಹಲವು ಜಿಲ್ಲೆಗಳ 31 ಸ್ತಬ್ಧ ಚಿತ್ರಗಳು ಹಾಗೂ ಹಲವು ಇಲಾಖೆಗಳ 18 ಸ್ತಬ್ಧ ಚಿತ್ರಗಳು ಸೇರಿದಂತೆ ಒಟ್ಟು 49 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.

ಬಾಗಲಕೋಟೆ ಜಿಲ್ಲೆಯಿಂದ ರಾಜವಂಶ ಬಾದಾಮಿ ಚಾಲುಕ್ಯರ ಹಾಗೂ ಬನಶಂಕರಿ ಸ್ತಬ್ಧ ಚಿತ್ರ, ಬಳ್ಳಾರಿ ಜಿಲ್ಲೆಯಿಂದ ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಿ ದೇವಾಲಯ, ಕಸೂತಿ ಹಾಗೂ ನಾರಿಹಳ್ಳ ಅಣೆಕಟ್ಟು ಸ್ತಬ್ಧ ಚಿತ್ರ, ಬೆಳಗಾವಿ ಜಿಲ್ಲೆಯಿಂದ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಸ್ತಬ್ಧ ಚಿತ್ರಗಳು ನಿರ್ಮಾಣವಾಗಿವೆ.‌

ವಾರ್ತಾ ಇಲಾಖೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ ಹಾಗೂ ನೆಲಮಂಗಲ ಸ್ತಬ್ಧ ಚಿತ್ರ, ಬೆಂಗಳೂರು ನಗರದಿಂದ ಚಂದ್ರಯಾನ-3 ರ ಸ್ತಬ್ಧ ಚಿತ್ರ, ಬೀದರ್ ಜಿಲ್ಲೆಯಿಂದ ಕೃಷ್ಣಮೃಗ ಸಂರಕ್ಷಣಾ ಧಾಮದ ಅರಣ್ಯ ಪ್ರದೇಶದ ಸ್ತಬ್ಧ ಚಿತ್ರ, ಚಾಮರಾಜನಗರ ಜಿಲ್ಲೆಯಿಂದ ಜಾನಪದ, ಭಕ್ತಿಯ ಬೀಡು ಹುಲಿ, ಆನೆಗಳ ಸಂತೃಪ್ತಿಯ ಕಾಡು ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

Advertisements

ಕೊಡಗು 7

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಏಕತೆಯಲ್ಲಿ ಅನೇಕತೆ ಎಂಬ ಸ್ತಬ್ಧ ಚಿತ್ರ, ಚಿಕ್ಕಮಗಳೂರು ಜಿಲ್ಲೆಯಿಂದ ಬೆಟ್ಟದಿಂದ ಬಟ್ಟಲಿಗೆ ಎಂಬ ಸ್ತಬ್ಧ ಚಿತ್ರ, ಚಿತ್ರದುರ್ಗ ಜಿಲ್ಲೆಯಿಂದ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸ್ತಬ್ಧ ಚಿತ್ರ, ದಕ್ಷಿಣ ಕನ್ನಡ ಜಿಲ್ಲೆಯಿಂದ ಪಿಲಿಕುಳ ಗುತ್ತಿನ ಮನೆ, ವಿವೇಕಾನಂದ ತಾರಾಲಯ ಹಾಗೂ ಬೀಚ್ ಸರ್ಫಿಂಗ್ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ದಾವಣಗೆರೆ ಜಿಲ್ಲೆಯಿಂದ ಸಂತ ಸೇವಾವಾಲಾ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯದ ಸ್ತಬ್ಧ ಚಿತ್ರ, ಧಾರವಾಡ ಜಿಲ್ಲೆಯಿಂದ ಧಾರವಾಡ ಪೇಡ ಧಾರವಾಡ ಎಮ್ಮೆ ನಮ್ಮ ಹೆಮ್ಮೆ ಎಂಬ ಸ್ತಬ್ಧ ಚಿತ್ರ, ಗದಗ ಜಿಲ್ಲೆಯಿಂದ ಸಬರಮತಿ ಆಶ್ರಮದ ಸ್ತಬ್ಧ ಚಿತ್ರ, ಹಾಸನ ಜಿಲ್ಲೆಯಿಂದ ಹಾಸನಾಂಬ ದೇವಾಲಯ, ಹಲ್ಮಿಡಿ ಶಾಸನ, ಈಶ್ವರ ದೇವಸ್ಥಾನ ಹಾಗೂ ಸಿದ್ದೇಶ್ವರ ದೇವಾಲಯದ ಸ್ತಬ್ಧಚಿತ್ರ ನಿರ್ಮಾಣವಾಗಿದೆ.

ಪೊಲೀಸ್‌ ಇಲಾಖೆ

ಹಾವೇರಿ ಜಿಲ್ಲೆಯಿಂದ ಶಂಕದೊಂದಿಗೆ ಶ್ರೀ ಕನಕದಾಸರು ಹಾಗೂ ಗದ್ದಿಗೆ ಕಾಗಿನೆಲೆ ಸ್ತಬ್ಧ ಚಿತ್ರ, ಕಲಬುರಗಿ ಜಿಲ್ಲೆಯಿಂದ ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ ವನ್ಯಜೀವಿಧಾಮದ ಸ್ತಬ್ಧ ಚಿತ್ರ, ಕೊಡಗು ಜಿಲ್ಲೆಯಿಂದ ಕೊಡಗಿನ ಪ್ರೇಕ್ಷಣೀಯ ಸ್ಥಳಗಳು, ಕೋಲಾರ ಜಿಲ್ಲೆಯಿಂದ ಮನರೇಗಾ ಯೋಜನೆ ಅಡಿ ವೀರಗಲ್ಲುಗಳ ಉತ್ಖನನ ಹಾಗೂ ಮರುಸ್ಥಾಪನೆಯ ಸ್ತಬ್ಧ ಚಿತ್ರ, ಕೊಪ್ಪಳ ಜಿಲ್ಲೆಯಿಂದ ಕಿನ್ನಾಳ ಕಲೆ ಹಾಗೂ ಕೈಮಗ್ಗ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ಮಂಡ್ಯ ಜಿಲ್ಲೆಯಿಂದ ಸಾಂಪ್ರದಾಯಿಕ ಉದ್ಯಮ ಆಲೆಮನೆ ಕುರಿತ ಸ್ತಬ್ಧ ಚಿತ್ರ, ಮೈಸೂರು ಜಿಲ್ಲೆಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳ ಕುರಿತ ಸ್ತಬ್ಧ ಚಿತ್ರ, ರಾಯಚೂರು ಜಿಲ್ಲೆಯಿಂದ ನವರಂಗ ದರ್ವಾಜ ಹಾಗೂ ಆರ್‌ಟಿಪಿಎಸ್ ಸ್ತಬ್ಧ ಚಿತ್ರ, ರಾಮನಗರ ಜಿಲ್ಲೆಯಿಂದ ಚನ್ನಪಟ್ಟಣದ ಗೊಂಬೆಗಳು ಹಾಗೂ ಇತ್ಯಾದಿ ಕಲೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.‌

ಕೊಡಗು ಜಿಲ್ಲೆ 1

ಶಿವಮೊಗ್ಗ ಜಿಲ್ಲೆಯಿಂದ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ, ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ, ತುಮಕೂರು ಜಿಲ್ಲೆಯಿಂದ ಮೂಡಲಪಾಯ ಯಕ್ಷಗಾನ, ತವರು ಕುರಿತ ಸ್ತಬ್ಧ ಚಿತ್ರ, ಉಡುಪಿ ಜಿಲ್ಲೆಯಿಂದ ತ್ಯಾಜ್ಯ ಮುಕ್ತ ಮತ್ಸ್ಯ ಸ್ನೇಹಿ ಸಮುದ್ರ ಕುರಿತ ಸ್ತಬ್ಧ ಚಿತ್ರ, ಉತ್ತರ ಕನ್ನಡ ಜಿಲ್ಲೆಯಿಂದ ಶರಾವತಿ ಮಡಿಲಲ್ಲಿ ವನ್ಯಜೀವಿ ಹಾಗೂ ಸಿಂಹದ ಬಾಲದ ಸಿಂಗಳಿಕ ಸಂರಕ್ಷಣೆ ಕುರಿತ ಸ್ತಬ್ಧ ಚಿತ್ರ ನಿರ್ಮಾಣಗೊಂಡಿದೆ.

ಚಂದ್ರಯಾನ 2

ವಿಜಯಪುರ ಜಿಲ್ಲೆಯಿಂದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಕುರಿತ ಸ್ತಬ್ಧ ಚಿತ್ರ, ವಿಜಯನಗರ ಜಿಲ್ಲೆಯಿಂದ ವಿಠಲ ದೇವಸ್ಥಾನದ ಕುರಿತ ಸ್ತಬ್ಧ ಚಿತ್ರ, ಯಾದಗಿರಿ ಜಿಲ್ಲೆಯಿಂದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ಹಲವು ಇಲಾಖೆಗಳಿಂದ 18 ಸ್ತಬ್ಧ ಚಿತ್ರಗಳು: ಸ್ತಬ್ಧ ಚಿತ್ರ ಉಪಸಮಿತಿಯಿಂದ ಅರಮನೆ ವಾದ್ಯಗೋಷ್ಠಿಯ ಸ್ತಬ್ಧ ಚಿತ್ರ, ಸ್ತಬ್ಧ ಚಿತ್ರ ಉಪಸಮಿತಿಯಿಂದ ಯುನೆಸ್ಕೋದಿಂದ ಗುರುತಿಸಲ್ಪಟ್ಟ ವಿಶ್ವ ಪಾರಂಪರಿಕ ಹೊಯ್ಸಳ ದೇವಸ್ಥಾನ, ಬೇಲೂರು ಹಳೇಬೀಡು, ಸೋಮನಾಥಪುರ ದೇವಾಲಯ ಕುರಿತ ಸ್ತಬ್ಧ ಚಿತ್ರ, ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಪೀಠಿಕೆ ಹಾಗೂ ಇಲಾಖೆಗಳ ಯೋಜನೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ

ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಸ್ತಬ್ಧ ಚಿತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷ್ಮಿ ಯೋಜನೆ ಹಾಗೂ ಇತರೆ ಯೋಜನೆಗಳ ಕುರಿತ ಸ್ತಬ್ಧ ಚಿತ್ರ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಹರ್ಷಿ ಸ್ತಬ್ಧ ಚಿತ್ರಗಳು ನಿರ್ಮಾಣವಾಗಿದ್ದು, ಈ ಎಲ್ಲ ಸ್ತಬ್ಧ ಚಿತ್ರಗಳೂ ಜಂಬೂ ಸವಾರಿಯಲ್ಲಿ ಸಾಗಲಿದ್ದು ರಾಜ್ಯದ ಹಲವು ಜಿಲ್ಲೆಗಳ ವಿಶೇಷತೆ ಸಾರಲಿವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X