ಕನ್ನಡ ಭಾಷೆಯ ಬೆಳವಣಿಗೆಯ ಕಾರ್ಯಚಟುವಟಿಕೆಗೆ ಕನ್ನಡ ಭವನದ ಅವಶ್ಯಕತೆ ಇದ್ದು, ತಾಲೂಕಿನಲ್ಲಿ ಒಂದು ಕನ್ನಡಭವನಕ್ಕೆ ನಿವೇಶನ ಮಂಜೂರು ಮಾಡಲಿ ಕೋರಿ ಹುಲಸೂರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗ್ರಾ.ಪಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
ಈ ಭಾಗದಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ, ನೆಲ, ಜಲ ಹಾಗೂ ಕನ್ನಡ ಭಾಷೆಯ ಜಾಗೃತಿ ಮೂಡಿಸಬೇಕಾಗಿದೆ. ಆದರೆ, ಈ ಪಟ್ಟಣದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಒಂದು ಕನ್ನಡ ಭವನ ಬೇಕು. ಈ ಪಟ್ಟಣದಲ್ಲಿ ಕನ್ನಡ ಭವನಕ್ಕಾಗಿ ಒಂದು ನಿವೇಶನ ಮಂಜೂರು ಮಾಡಿ, ಕನ್ನಡ ಭಾಷೆಯ ಬೆಳವಣಿಗೆಗೆ ಜೊತೆಗೆ ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯಕ್ಕೆ ಸಹಕರಿಸಲು ಒಂದು ನಿವೇಶನ ಮಂಜೂರು ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷ ಸಂಜೀವಕುಮಾರ ಭೂಸಾರೆ ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂದೀಪ ಬಿರಾದಾರ ರವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಆದಷ್ಟು ಬೇಗ ಕನ್ನಡ ಭವನಕ್ಕಾಗಿ ನಿವೇಶನವನ್ನು ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹುಲಸೂರ ಅಧ್ಯಕ್ಷ ನಾಗರಾಜ ಹಾವಣ್ಣ, ಬಸವಕುಮಾರ ಕವಟೆ ಬಸವರಾಜ ಪಾಟೀಲ, ನಾಗೇಶ್ ಮೇತ್ರೆ, ಮಲ್ಲಿಕಾರ್ಜುನ ದೇವಪ್ಪ, ದೀಪಕ ಪಾಟೀಲ, ಡಾ.ಧರ್ಮೇಂದ್ರ ಭೋಸ್ಲೆ ಉಪಸ್ಥಿತರಿದ್ದರು.