- ನಾನೇನು ಕದ್ದು ಓಡಿ ಹೋಗಿ, ಪಲಾಯನ ಮಾಡಲ್ಲ: ಎಚ್‌ಡಿ ಕುಮಾರಸ್ವಾಮಿ
- ‘ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತು ಎಂತಹದ್ದು ಎಂಬುದು ಕಂಡಿದ್ದೇನೆ’
ರಾಮನಗರ ಜಿಲ್ಲೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಹಿರಂಗ ಚರ್ಚೆಗೆ ಕರೆದಿರುವ ಸವಾಲನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ನಾನೇನು ಕದ್ದು ಓಡಿ ಹೋಗಿ, ಪಲಾಯನ ಮಾಡಲ್ಲ, ನನ್ನ ಬಳಿಯೂ ಸಾಕಷ್ಟು ಸರಕು ಇದೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ವಿಜಯದಶಮಿಯ ಆಸುಪಾಸಿನಲ್ಲಿ ಹಬ್ಬದ ಆಚರಣೆ ಜೊತೆಗೆ ಸಿಎಂ ಹಾಗೂ ಡಿಸಿಎಂ ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅದಕ್ಕೆ ಸಂಬಂಧಪಟ್ಟ ಎರಡು ಮೂರು ವಿಚಾರಗಳಿಗೆ ಡಿಸಿಎಂ ನನಗೆ ಸವಾಲು ಹಾಕಿದ್ದಾರೆ. ಅದಕ್ಕೆ ನಾನು ಚರ್ಚೆಗೆ ಸಿದ್ದನಿದ್ದೇನೆ. ನಾನು ಸ್ವೀಕಾರ ಮಾಡುತ್ತೇನೆ” ಎಂದರು.
“ಇವತ್ತಿನ ಆರ್ಥಿಕ ಪರಿಸ್ಥಿತಿಗೆ ಹಿಂದಿನ ಬಿಜೆಪಿ ಕಾರಣ ಎಂದು ಸಿಎಂ ಹೇಳಿದ್ದಾರೆ. ಇದಕ್ಕೆ ಶ್ವೇತ ಪತ್ರ ಹೊರಡಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಸ್ವಾಗತ ಮಾಡುತ್ತೇನೆ. ಅವರು ಕೊಟ್ಟಂತಹ ತೀರ್ಮಾನಗಳ ಆಧಾರದ ಮೇಲೆ ಬಿಜೆಪಿ ಸರ್ಕಾರ ನಡೆದಿದೆ. ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತು ಎಂತಹದ್ದು ಎಂಬುದು ನೋಡಿದ್ದೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭೀಕರ ಬರದ ನಡುವೆ ಅನಗತ್ಯ ವಿವಾದಗಳಲ್ಲಿ ಕಾಲಹರಣ ಮಾಡುತ್ತಿರುವ ಸರ್ಕಾರ
ನಾನು ರಾಜಕೀಯದ ಖಳನಾಯಕ
“ಸಿದ್ದರಾಮಯ್ಯ ಅವರಿಗೆ ನಾನು ಸ್ನೇಹಿತನಾಗಲು ಸಾಧ್ಯವೇ? ಅವರು ಹೇಳಿದ ಹಾಗೇ ಸಿದ್ದರಾಮಯ್ಯ ಅವರಿಗೆ ನಾನು ರಾಜಕೀಯ ವಿಲನ್ ಹೌದು. ಸಿದ್ದರಾಮಯ್ಯ ಅವರ ತಪ್ಪುಗಳನ್ನು ಜನರ ಎದುರು ಇಡುತ್ತಿದ್ದೇನೆ. ಮಾತು ಎತ್ತಿದರೆ ಸಾಕು ವೆಸ್ಟ್ ಎಂಡ್ ಹೋಟೆಲ್ ಎನ್ನುತ್ತಾರೆ ಸಿದ್ದರಾಮಯ್ಯ. ನಾನು ಆ ಹೋಟೆಲ್‌ನಲ್ಲಿ ಇದ್ದುಕೊಂಡು ಏನೆಲ್ಲ ಕಾರ್ಯಕ್ರಮ ಮಾಡಿದ್ದೇನೆ ಎಂಬುದು ದಾಖಲೆ ಸಮೇತ ಹೇಳುವೆ” ಎಂದರು.
“ಕುಮಾರಸ್ವಾಮಿ ಅವರ ಅನುದಾನದಿಂದ ನಮ್ಮ ಮುಖ ಕ್ಷೇತ್ರದಲ್ಲಿ ಉಳಿದಿದೆ ಎಂದು ಕೆಲವು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಈಗ ಅವರು ಸೋತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಅವರು ನನ್ನನ್ನು ಕೈಗೊಂಬೆಯಾಗಿ ನಡೆಸಿಕೊಂಡಿದ್ದಾರೆ. ಮನವಿ ಪತ್ರಗಳನ್ನು ನನ್ನ ಟೇಬಲ್ ಮೇಲೆ ಎಸೆದು ಅವಮಾನ ಮಾಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.