ಸದ್ಯ ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ರಾಜ್ಯಾದ್ಯಂತ ಹಲವೆಡೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ, ತನಿಖೆ ನಡೆಸುತ್ತಿದ್ದಾರೆ. ಗುರುವಾರ ವಿಜಯಪುರದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯ ಬಬಲೇಶ್ವರದಲ್ಲಿರುವ ವಿಜುಗೌಡ ಪಾಟೀಲ್ ಅವರ ಮನೆಗೆ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿದೆ. ವಿಜುಗೌಡ ಪಾಟೀಲ್ ಅವರ ಪುತ್ರ ಶಾಶ್ವತಗೌಡ ರದ್ದು ಎನ್ನಲಾದ ಹುಲಿ ಉಗುರು ಹೋಲುವ ಚಿನ್ನದ ಲಾಕೆಟ್‌ಅನ್ನು ಪರಿಶೀಲಿಸಿದ್ದಾರೆ.
ಇತ್ತೀಚಿಗೆ, ಶಾಶ್ವತಗೌಡ ಪಾಟೀಲ ಪೆಂಡೆಂಟ್ನಲ್ಲಿ ಹುಲಿ ಉಗುರು ಹಾಕಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಹುಲಿ ಉಗುರು ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿಜುಗೌಡ, “ಅದು ಹಳೆಯ ಲಾಕೆಟ್. ವಾಸ್ತು ನಂಬಿಕೆಯಿಂದಾಗಿ ಈ ಹಿಂದೆ ಶಾಶ್ವತಗೌಡ ಅದನ್ನು ಧರಿಸುತ್ತಿದ್ದರು. ಈಗ ಅದನ್ನು ಬಳಸುತ್ತಿಲ್ಲ” ಎಂದು ಹೇಳಿದ್ದಾರೆ.