ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕೆಎಸ್ಆರ್ ಬೆಂಗಳೂರು – ಹೊಸ ಭುವನೇಶ್ವರ ರೈಲು ನಿಲ್ದಾಣ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ ರೈಲುಗಳ ಒಂದು ಟ್ರಿಪ್ ಓಡಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ.
(ರೈಲು ಸಂಖ್ಯೆ. 06287 KSR) ಬೆಂಗಳೂರು ಮತ್ತು ಹೊಸ ಭುವನೇಶ್ವರ ನಡುವೆ ಕಾಯ್ದಿರಿಸದ ಎಕ್ಸ್ಪ್ರೆಸ್ ವಿಶೇಷ ರೈಲು (ಒಂದು ಪ್ರಯಾಣ ಮಾತ್ರ) ಅಕ್ಟೋಬರ್ 28 ರಂದು ಬೆಳಗ್ಗೆ 3:30 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು ಭುವನೇಶ್ವರವನ್ನು ಮರುದಿನ ಬೆಳಗ್ಗೆ 6:30 ಕ್ಕೆ ತಲುಪುತ್ತದೆ.
ಮಾರ್ಗದಲ್ಲಿ ರೈಲು ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ಪೇಟೆ, ಕಟಪಾಡಿ, ರೇಣಿಗುಂಟ, ಗುಡೂರು, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಪೆಂಡುರ್ಟಿ, ಕೊತ್ತವಲಸ, ಶ್ರೀಕಾಕುಳಂ ರಸ್ತೆ, ಪಲಾಸ, ಬ್ರಹ್ಮಪುರ, ಛತ್ರಪುರ, ಖುರ್ದಾ ರಸ್ತೆ ಹಾಗೂ ಭುವನೇಶ್ವರ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಲಿದೆ.
(ರೈಲು ಸಂಖ್ಯೆ 06288) ಹೊಸ ಭುವನೇಶ್ವರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಈ ವಿಶೇಷ ರೈಲು ಭುವನೇಶ್ವರದಿಂದ ಅಕ್ಟೋಬರ್ 29 ರಂದು ಬೆಳಗ್ಗೆ 8:15ಕ್ಕೆ ಹೊರಟು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ಮರುದಿನ ಬೆಳಗ್ಗೆ 9:45 ಕ್ಕೆ ತಲುಪಲಿದೆ.
ಈ ಸುದ್ದಿ ಓದಿದ್ದೀರಾ? ರಾಜಧಾನಿ ಬೆಂಗಳೂರಿನಲ್ಲಿ 97 ಲಕ್ಷ ಮತದಾರರು; ಮತದಾರರ ಕರಡು ಪಟ್ಟಿ ಪ್ರಕಟ
ರೈಲು ಭುವನೇಶ್ವರ, ಖುರ್ದಾ ರಸ್ತೆ, ಛತ್ರಪುರ, ಬ್ರಹ್ಮಪುರ, ಪಲಾಸ, ಶ್ರೀಕಾಕುಳಂ ರಸ್ತೆ, ಕೊತ್ತವಲಸ, ಪೆಂಡುರ್ಟಿ, ದುವ್ವಾಡ, ರಾಜಮಂಡ್ರಿ, ವಿಜಯವಾಡ, ಗುಡೂರು, ರೇಣಿಗುಂಟ, ಕಟಪಾಡಿ, ಜೋಲಾರಪೇಟೆ, ಬಂಗಾರಪೇಟೆ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ಈ ರೈಲು 21 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಜತೆಗೆ ಅಂಗವಿಕಲರ ಸ್ನೇಹಿ ವಿಭಾಗವನ್ನು ಹೊಂದಿದೆ ಎಂದು ಇಲಾಖೆ ಮಾಹಿತಿ ನೀಡಿದೆ.