ಕಾಂಗ್ರೆಸ್‌ನವರು ಅಧಿಕಾರದ ದಾಹದಲ್ಲಿ ಮುಳುಗಿದ್ದಾರೆ. ನೋಡುತ್ತಿರಿ, ಈ ಕಾಂಗ್ರೆಸಿಗರಿಂದಲೇ ಸರ್ಕಾರ ಪತನವಾಗಲಿದೆ ಎಂದು ಮಾಜಿ ಡಿಸಿಎಂ ಸಿ ಎನ್ ಅಶ್ವತ್ಥ ನಾರಾಯಣ ಭವಿಷ್ಯ ನುಡಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್‌ನವರು ತಾವೇ ಮಾಡಿಕೊಂಡ ತಪ್ಪನ್ನು ಬಿಜೆಪಿ ಮೇಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದರು.
“ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ನಯಾ ಪೈಸೆ ಅಭಿವೃದ್ಧಿ ಆಗಿಲ್ಲ. ಸಿಎಂ, ಡಿಸಿಎಂ ತಮ್ಮ ತಮ್ಮ ಗುಂಪುಗಳಲ್ಲಿ ಮುಳುಗಿದ್ದಾರೆ. ಅನೇಕ ಸಭೆ ಮಾಡುತ್ತಿದ್ದಾರೆ. ದುಬೈ ಹೋಗೋದು, ಹೊಸ ಕಾರ್ ಖರೀದಿ ಮಾಡೋದು, ಕಚೇರಿ ನವೀಕರಣ ಮಾಡೋದು ಹೊರತಾಗಿ ನಯಾ ಪೈಸೆ ಅಭಿವೃದ್ಧಿ ಆಗಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಡಿಕೆ ಶಿವಕುಮಾರ್ರಿಂದಲೇ ಸರ್ಕಾರ ಬೀಳುತ್ತದೆ: ರಮೇಶ್ ಜಾರಕಿಹೊಳಿ
ಪರಮೇಶ್ವರ್ ಮೂಗಿಗೆ ಮತ್ತೆ ತುಪ್ಪ ಸವರುವ ಕೆಲಸ ನಡೆಯುತ್ತಿದೆ. ಡಿಕೆಶಿಗೆ ಟಕ್ಕರ್ ಕೊಡಲು ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಸಭೆ ಆಯೋಜಿಸಿದ್ದಾರೆ. ಈ ಮೊದಲು ಪರಮೇಶ್ವರ್ ಅವರು ಸಿಎಂ ಸ್ಥಾನ ಕೇಳಿರಲಿಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾಗ ನನ್ನ ಉಪಮುಖ್ಯಮಂತ್ರಿ ಮಾಡಿ ಅಂತ ಗೋಗರೆದಿದ್ದರು. ಅವರನ್ನು ಮೊದಲು ಡಿಸಿಎಂ ಮಾಡಲೇ ಇಲ್ಲ. ತುಂಬಾ ಗೋಗರೆದ ನಂತರ ಡಿಸಿಎಂ ಮಾಡಿದ್ದರು” ಎಂದರು.