ಮಾನ್ವಿ ತಾಲೂಕಿನ ಗೊಲದಿನ್ನಿ ಎಸ್ಕೇಪ್‌ನಿಂದ ರಾಜಲದಿನ್ನಿ, ನಸಲಾಪುರು, ಯರಮಲದೊಡ್ಡಿ, ಮುಷ್ಟೂರು, ರಂಗದಾಳ, ಬುದ್ದಿನ್ನಿ, ಮಲ್ಲಾಪುರು ಗ್ರಾಮಗಳಿಗೆ ತುಂಗಭದ್ರ ಎಡದಂಡೆ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿ ಗ್ರಾಮಗಳ ರೈತರು ನಂದಿಹಾಳ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದ್ದಾರೆ.
“ಜನ, ಜಾನುವಾರುಗಳಿಗೆ ನೀರಿಲ್ಲದ ಪರಸ್ಥಿತಿ ನಿರ್ಮಾಣವಾಗಿದೆ. ಕುಡಿಯಲು ನೀರಿಗಾಗಿ ಪರದಾಡುವಂತಾಗಿದೆ. ಅನೇಕ ಬಾರಿ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಳೆ ಬಾರದೆ ಬರ ಪರಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳಿಗೆ ತುರ್ತಾಗಿ ನೀರು ಹರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಧರಣಿ ಸ್ಥಳಕ್ಕೆ ಮಾನ್ವಿ ತಹಸೀಲ್ದಾರ್ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತು-ಕತೆ ನಡೆಸಿದ್ದಾರೆ. ಅವರನ್ನು ತರಾಟೆಗೆ ತೆಗೆದುಕೊಂಡ ರೈತರು ‘ಸುಳ್ಳು ಭರವಸೆ ನೀಡುವದನ್ನು ನಿಲ್ಲಿಸಿ, ನೀರು ಹರಿಸಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ರಾಜಾ ರಾಮಚಂದ್ರ ನಾಯಕ, ಶಿವಶಂಕ್ರಯ್ಯಸ್ವಾಮಿ ರಾಜಲದಿನ್ನಿ. ಈರೆಶ ಪೂಜಾರಿ, ಹನುಮಂತಗೌಡ ಮುಷ್ಠೂರು, ರಾಮಕೃಷ್ಣ ಅಮರಾವತಿ, ಅಮರೇಶ ನಂದಿಹಾಳ, ಲಕ್ಷö್ಮಣ ನಂದಿಹಾಳ, ಬಸವರೆಡ್ಡಿ ಮಲದೊಡ್ಡಿ, ಮಲ್ಲಿಕಾರ್ಜುನಸ್ವಾಮಿ ಅಮರಾವತಿ, ಗಾಧಿಲಿಂಗಪ್ಪ, ಶರಣಪ್ಪಗೌಡ ಮುದ್ಲಾಪುರು, ಚನ್ನಪ್ಪಗೌಡ, ಕೃಷ್ಣಪ್ಪ ರಂಗದಾಳ, ಶರಣಪ್ಪಗೌಡ ರಂಗದಾಳ, ತಿಮ್ಮಯ್ಯ ಮದ್ಲಾಪೂರು, ಶರಣಪ್ಪ ನಾಯಕ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾದರು.
ವಿವಿಧ ಗ್ರಾಮಗಳ ಹಲವರು ಇದ್ದರು.
ವರದಿ : ಹಫೀಜುಲ್ಲ