ವಿಜಯದಶಮಿಯ ದಿನ ತಾರಕೇಶ್ವರ ದೇವಸ್ಥಾನದ ಪಲ್ಲಕ್ಕಿ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ವಾಗ್ವಾದ ನಡೆದಿತ್ತು. ಅದನ್ನು ಖಂಡಿಸಿ ಹಿಂದುತ್ವವಾದಿ ಕೋಮು ಸಂಘಟನೆಗಳು ಸೋಮವಾರ ಹಾನಗಲ್‌ನಲ್ಲಿ ತಮಟೆ ಚಳುವಳಿ ನಡೆಸಿದ್ದು, ಪೊಲೀಸರು ಪ್ರತಿಭಟನೆಯನ್ನು ತಡೆದಿದ್ದಾರೆ.
ಹವೇರಿ ಜಿಲ್ಲೆಯ ಹಾನಗಲ್‌ನಲ್ಲಿ ದಸರಾದಂದು ಪಲ್ಲಕ್ಕಿ ಮೆರವಣಿಗೆ ನಡೆದಿತ್ತು. ಆ ವೇಳೆ, ಕಾಶ್ಮೀರಿ ದರ್ಗಾ ರಸ್ತೆಯಲ್ಲಿ ಎರಡು ಕೋಮುಗಳ ನಡುವೆ ವಾಗ್ವಾದ ನಡೆದಿತ್ತು.
ಘಟನೆಯನ್ನು ಖಂಡಿಸಿ ಹಿಂದುತ್ವವಾದಿಗಳು ಕುಮಾರೇಶ್ವರ ವಿರಕ್ತಮಠದ ಆವರಣದಿಂದ ತಮಟೆ ಚಳವಳಿ ಆರಂಭಿಸಲು ಸೋಮವಾರ ಮುಂದಾಗಿದ್ದರು. ಆದರೆ, ಇದಕ್ಕೆ ಅವಕಾಶ ನೀಡಿದ ಪೊಲೀಸರು ಪಟ್ಟಣದಲ್ಲಿ ನಿಷೇಧ ನಿಜಾರಿ ಗೊಳಿಸಿದ್ದರು. ಆದರೂ, ಪ್ರತಿಭಟನೆ ನಡೆಸಲು ಮುಂದಾದ ಹಿಂದುತ್ವವಾದಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಸಂಜೆ ಬಿಡುಗಡೆ ಮಾಡಿದ್ದಾರೆ.
ಪಟ್ಟಣ ಪ್ರವೇಶಿಸುವ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿತ್ತು. ಪಟ್ಟಣ ಪ್ರವೇಶಿಸುವ ಜನರ ಮೇಲೆ ಪೊಲೀಸ್ ನಿಗಾ ಇಡಲಾಗಿತ್ತು. ಒಟ್ಟು 300 ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.