ಪ್ರಾಣಿಗಳನ್ನು ಬೇಟೆಯಾಡಿ ಅದರ ಉತ್ಪನ್ನಗಳನ್ನು ಬಳಸಿದರೆ ಮಾತ್ರ ಅಪರಾಧವೇ ಹೊರತು, ಪೂರ್ವಜರಿಂದ ಬಂದ ಉತ್ಪನ್ನಗಳ ಬಳಕೆ ಅಪರಾಧವಲ್ಲ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣನವರು ಸ್ಪಷ್ಟಪಡಿಸಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ್ದು, “ನಟ ಜಗ್ಗೇಶ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ತಡೆಯಾಜ್ಞೆ ಕೂಡ ನೀಡಿದೆ.
ಪರಂಪರಾಗರವಾಗಿ ಬಳಸುತ್ತಿದ್ದ ವಸ್ತುಗಳ ಮೇಲೆ ಪ್ರಕರಣ ದಾಖಲು ಸರಿಯಲ್ಲ” ಎಂದು ಪೊನ್ನಣ್ಣ ಹೇಳಿದ್ದಾರೆ.
“ಅರಣ್ಯ ಅಧಿಕಾರಿಗಳು ಮೊದಲು ಕಾನೂನು ತಿಳಿದುಕೊಳ್ಳಲಿ. ಸರ್ಕಾರ ಅರಣ್ಯಾಧಿಕಾರಿಗಳಿಗೆ ಸರಿಯಾದ ನಿರ್ದೇಶನ ನೀಡಲಿ” ಎಂದರು.
“ಈ ವಿಚಾರ ಸಂಬಂಧ ಕಾನೂನಿನಲ್ಲಿ ರಕ್ಷಣೆ ಇದೆ. ಅರಣ್ಯ ಅಧಿಕಾರಿಗಳಿಗೆ ಎಫ್‌ಐಆರ್ ಮಾಡುವ ಅಧಿಕಾರ ಇಲ್ಲ. ಕಾನೂನು ವ್ಯಾಪ್ತಿ ಮೀರಿ ಎಫ್‌ಐಆರ್ ಮಾಡಲಾಗುತ್ತಿದೆ. ಕೊಡಗಿನಲ್ಲಿ ಪೂರ್ವಜರ ಕಾಲದಿಂದಲೂ ಪಾರಂಪರಿಕವಾಗಿ ವನ್ಯ ಜೀವಿಗಳ ವಸ್ತುಗಳನ್ನು ಬಳಸಲಾಗುತ್ತಿದೆ. ಇದು ಹೇಗೆ ಅಪರಾಧವಾಗುತ್ತೆ?” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಂಧನೂರು ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಆಗ್ರಹ
“ಈ ಸಂಬಂಧ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಹಾಗೆಯೇ ಈ ಪ್ರಕರಣಕ್ಕೆ ರಾಜ್ಯ ಸರ್ಕಾರದ ಮೂಲಕ ರಿಲೀಫ್ ನೀಡಲಾಗುವುದು” ಎಂದು ಹೇಳಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡರುಗಳಾದ ವೀಣಾಚಯ್ಯ, ಧರ್ಮಜಾ ಉತ್ತಪ್ಪ, ಇಸ್ಮಾಯಿಲ್, ಟಿ ಪಿ ರಮೇಶ್, ಕೊಲ್ಯದ ಗಿರೀಶ್ ಇದ್ದರು.