ಭಾರತೀಯ ರಿಸರ್ವ ಬ್ಯಾಂಕ್ ನವೆಂಬರ್ ತಿಂಗಳ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ತಿಂಗಳು ಬ್ಯಾಂಕ್‌ಗಳಿಗೆ ಬರೋಬ್ಬರಿ 15 ದಿನ ರಜೆ ಇರಲಿದೆ.
ಭಾರತೀಯ ರಿಸರ್ವ ಬ್ಯಾಂಕ್(RBI) ಪ್ರತಿ ತಿಂಗಳು ರಜಾ ದಿನಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಆರ್‌ಬಿಐ ರಜಾ ಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋ ಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿವೆ. ಈ ರಜೆಗಳು ನವೆಂಬರ್ ತಿಂಗಳ ಎಲ್ಲ ರವಿವಾರಗಳು, ಎರಡನೆ ಮತ್ತು ನಾಲ್ಕನೇಯ ಶನಿವಾರಗಳ ರಜೆಯನ್ನೂ ಒಳಗೊಂಡಿವೆ.
ಬ್ಯಾಂಕ್ ರಜೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದ ಆರ್‌ಬಿಐ
- ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾ ದಿನ
- ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು
- ಅಕೌಂಟ್ಸ್ ಕ್ಲೋಸಿಂಗ್ ರಜೆಗಳು
ಶನಿವಾರ, ಭಾನುವಾರ ಸೇರಿ ಒಟ್ಟು 15 ರಜೆಗಳು ನವೆಂಬರ್ ತಿಂಗಳಲ್ಲಿ ಇವೆ. ಬ್ಯಾಂಕ್ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ದೀಪಾವಳಿ ಹಬ್ಬವಲ್ಲದೇ, ಕನ್ನಡ ರಾಜ್ಯೋತ್ಸವ, ಕನಕದಾಸ ಜಯಂತಿ ಇತ್ಯಾದಿ ರಜೆಗಳಿವೆ. ಕರ್ವಾ ಚೌತ್, ವಂಗಲ ಹಬ್ಬ, ಗೋವರ್ಧನ ಪೂಜೆ ಇತ್ಯಾದಿ ನಾನಾ ಪ್ರದೇಶಗಳಿಗೆ ಸೀಮಿತವಾದ ಹಬ್ಬಗಳಿಗೆ ಆಯಾ ಪ್ರದೇಶಗಳಲ್ಲಿ ರಜೆ ಇದೆ.
ಕರ್ನಾಟಕದಲ್ಲಿ ನವೆಂಬರ್ ತಿಂಗಳಲ್ಲಿ ಒಟ್ಟು 9 ರಜೆಗಳಿವೆ. ಬ್ಯಾಂಕ್‌ಗಳು ಈ ದಿನಗಳಲ್ಲಿ ಬಂದ್ ಆಗಿದ್ದರೂ ಕೂಡ ನಿಮ್ಮ ಸಾಮಾನ್ಯ ಹಣಕಾಸು ಚಟುವಟಿಕೆಗಳಿಗೆ ಹೆಚ್ಚಿನ ಅಡ್ಡಿ-ಆತಂಕ ಇರುವುದಿಲ್ಲ. ಎಟಿಎಂಗಳು, ಡಿಜಿಟಲ್ ಬ್ಯಾಂಕಿಂಗ್ ಇರುತ್ತದೆ.
ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಝೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ.
ಈ ಸುದ್ದಿ ಓದಿದ್ದೀರಾ? ಚಾಮರಾಜಪೇಟೆ ಈದ್ಗಾ ಮೈದಾನ: ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ನೀಡಿದ ಹೈಕೋರ್ಟ್
2023ರ ನವೆಂಬರ್‌ನಲ್ಲಿ ನಾನಾ ಕಡೆ ಇರುವ ಬ್ಯಾಂಕ್ ರಜಾ ದಿನಗಳು
- ನವೆಂಬರ್ 1 ಬುಧವಾರ: ಕನ್ನಡ ರಾಜ್ಯೋತ್ಸವ, ಕತ್ ಮತ್ತು ಕರ್ವಾ ಚೌತ್ (ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ರಜೆ)
- ನವೆಂಬರ್ 5: ಭಾನುವಾರದ ರಜೆ
- ನವೆಂಬರ್ 10 ಶುಕ್ರವಾರ: ವಂಗಲ ಹಬ್ಬ (ಮೇಘಾಲಯ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ)
- ನವೆಂಬರ್ 11: ಎರಡನೇ ಶನಿವಾರ
- ನವೆಂಬರ್ 12: ಭಾನುವಾರ
- ನವೆಂಬರ್ 13, ಸೋಮವಾರ: ಗೋವರ್ಧನ ಪೂಜೆ, ದೀಪಾವಳಿ ಹಬ್ಬ (ತ್ರಿಪುರಾ, ಸಿಕ್ಕಿಂ, ಉತ್ತರಾಖಂಡ್, ಮಣಿಪುರ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ).
- ನವೆಂಬರ್ 14, ಮಂಗಳವಾರ: ದೀಪಾವಳಿ ಹಬ್ಬ (ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಸಿಕ್ಕಿಂ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ)
- ನವೆಂಬರ್ 15, ಬುಧವಾರ: ದೀಪಾವಳಿ, ಚಿತ್ರಗುಪ್ತ ಜಯಂತಿ, ನಿಂಗೋಲ್ ಚಕ್ಕೋಬಾ, ಭ್ರತೃದ್ವಿತೀಯಾ ಆಚರಣೆ (ಸಿಕ್ಕಿಂ, ಮಣಿಪುರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶದಲ್ಲಿ ಬ್ಯಾಂಕುಗಳಿಗೆ ರಜೆ)
- ನವೆಂಬರ್ 19: ಭಾನುವಾರದ ರಜೆ
- ನವೆಂಬರ್ 20, ಸೋಮವಾರ: ಆರ್ಘ್ಯ (ಬಿಹಾರ ಮತ್ತು ರಾಜಸ್ಥಾನದಲ್ಲಿ ಬ್ಯಾಂಕುಗಳಿಗೆ ರಜೆ)
- ನವೆಂಬರ್ 23, ಮಂಗಳವಾರ: ಸೆಂಗ್ ಕುತ್ಸ್ನೆಮ್, ಇಗಾಸ್ ಬಾಗವಾಲ್ ಹಬ್ಬ (ಉತ್ತರಾಖಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ).
- ನವೆಂಬರ್ 25: ನಾಲ್ಕನೇ ಶನಿವಾರದ ರಜೆ
- ನವೆಂಬರ್ 26: ಭಾನುವಾರದ ರಜೆ
- ನವೆಂಬರ್ 27, ಸೋಮವಾರ: ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಮಾ ಮತ್ತು ರಾಹಸ್ ಪೂರ್ಣಿಮಾ ಹಬ್ಬ ಪ್ರಯುಕ್ತ ಮಧ್ಯಪ್ರದೇಶ, ಒಡಿಶಾ, ತ್ರಿಪುರಾ, ಮಿಝೋರಾಂ, ಮಹಾರಾಷ್ಟ್ರ, ಚಂಡೀಗಢ, ಉತ್ತರಾಖಂಡ್, ತೆಲಂಗಾಣ, ರಾಜಸ್ಥಾನ, ಜಮ್ಮು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ದೆಹಲಿ, ಬಿಹಾರ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.
- ನವೆಂಬರ್ 30, ಗುರುವಾರ: ಕನಕದಾಸ ಜಯಂತಿ (ಕರ್ನಾಟಕದಲ್ಲಿ ರಜೆ)
ಕರ್ನಾಟಕದಲ್ಲಿ ನವೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳು
- ನವೆಂಬರ್ 1: ಕನ್ನಡ ರಾಜ್ಯೋತ್ಸವ
- ನವೆಂಬರ್ 5: ಭಾನುವಾರ
- ನವೆಂಬರ್ 11: ಎರಡನೇ ಶನಿವಾರ
- ನವೆಂಬರ್ 12: ಭಾನುವಾರ
- ನವೆಂಬರ್ 14, ಮಂಗಳವಾರ: ದೀಪಾವಳಿ ಹಬ್ಬ
- ನವೆಂಬರ್ 19: ಭಾನುವಾರದ ರಜೆ
- ನವೆಂಬರ್ 25: ನಾಲ್ಕನೇ ಶನಿವಾರದ ರಜೆ
- ನವೆಂಬರ್ 26: ಭಾನುವಾರದ ರಜೆ
- ನವೆಂಬರ್ 30 ಗುರುವಾರ: ಕನಕದಾಸ ಜಯಂತಿ
ಈ ತಿಂಗಳಲ್ಲಿ ಬ್ಯಾಂಕ್‌ಗಳು ಹಲವು ದಿನಗಳವರೆಗೆ ಮುಚ್ಚಿರುತ್ತವೆ. ಆದ್ದರಿಂದ, ನೀವು ಬ್ಯಾಂಕ್‌ನಲ್ಲಿ ಏನಾದರೂ ನಿಮಗೆ ಕೆಲಸಗಳಿದ್ದರೆ, ರಜಾ ದಿನಗಳ ಪಟ್ಟಿಯನ್ನು ನೋಡಿದ ನಂತರವೇ ಬ್ಯಾಂಕ್‌ಗೆ ಹೊರಡಿ.
Eager to ignite your website’s audience? Our AI-powered system brings targeted visitors through keywords and regional accuracy from countries to city streets.
Looking to increased profits, vibrant website traffic, or a wider digital presence?
We adapt it to fit your plan. Enjoy a 7-day free trial period with no contract. Begin here:
https://ow.ly/95yt50WAbaO
Dealing with low website traffic levels? Our AI-driven tool attracts targeted crowds through keywords plus geographic tags from continents to city blocks.
Wanting more earnings, active engagement, or wider online reach?
We tailor it to suit your strategy. Enjoy a 7-day free trial period with no contract. Dive in here:
https://ow.ly/X2Kx50WvEoZ
Need more clicks and conversions for Eedina Com? Watch this short video about our AI-powered traffic service: https://www.youtube.com/shorts/A8YPkXQq4EY