ತಮಿಳುನಾಡು | ಗಾಳಿಪಟಕ್ಕೆ ಬಳಸುವ ಮಾಂಜಾ ದಾರ; ತಯಾರಿಕೆ – ಮಾರಾಟ ನಿಷೇಧ

Date:

Advertisements

50ನೇ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿಸಲು ನವೆಂಬರ್ 1ರಂದು ಸಂಜೆ ಐದು ಗಂಟೆಗೆ ರಾಜ್ಯಾದ್ಯಂತ ಕೆಂಪು-ಹಳದಿ ಗಾಳಿಪಟ ಹಾರಿಸಲು ಕರ್ನಾಟಕ ಸರ್ಕಾರ ಸೂಚನೆ ನೀಡಿದೆ.

ಇದೇ ಹೊತ್ತಿನಲ್ಲಿ, ತಮಿಳುನಾಡಿನಲ್ಲಿ ಗಾಳಿಪಟ ಹಾರಿಸಲು ಬಳಸುವ ಚೈನೀಸ್​ ಮಾಂಜಾ ದಾರದ ಬಳಕೆ, ತಯಾರಿಕೆ, ಮಾರಾಟವನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿಯೂ ಈ ಹಿಂದೆಯೇ ಮಾಂಜಾ ದಾರ ಮಾರಾಟ ನಿಷೇಧಿಸಲಾಗಿತ್ತು. ಆದರೂ, ಅಲ್ಲಲ್ಲಿ ಇವುಗಳ ಮಾರಾಟ ಕಂಡುಬರುತ್ತಿದೆ.

ಹಾರುವ ಗಾಳಿಪಟ ಕಣ್ಣಿಗೆ ಎಷ್ಟು ಸುಂದರವಾಗಿ ಕಾಣಿಸುತ್ತದೆಯೋ ಇದಕ್ಕೆ ಬಳಸುವ ದಾರದಿಂದ ಅಷ್ಟೇ ಅಪಾಯಗಳಾಗುವ ಸಾಧ್ಯತೆಗಳಿವೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

Advertisements

ಮಾಂಜಾ ದಾರದ ಎಳೆಗಳು ನೈಲಾನ್, ಪ್ಲಾಸ್ಟಿಕ್, ಕೆಲವೊಮ್ಮೆ ಗಾಜಿನಿಂದ ಕೂಡ ಲೇಪಿತವಾಗಿರುತ್ತವೆ. ಇವುಗಳು ಮನುಷ್ಯರ ಕುತ್ತಿಗೆಗೆ ಅಥವಾ ಪ್ರಾಣಿ, ಪಕ್ಷಿಗಳಿಗೆ ಸಿಲುಕಿಕೊಂಡರೆ ಖಂಡೀತವಾಗಿಯೂ ಕೊಯ್ಯುವುತ್ತವೆ. ಅಂತಹ ಹಲವು ಘಟನೆಗಳು ಈ ಹಿಂದೆ ನಡೆದಿವೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

2017ರಲ್ಲಿ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್​ ಆಫ್ ಅನಿಮಲ್ಸ್​ ಸೇರಿದಂತೆ ಇತರೆ ಸಂಸ್ಥೆಗಳು ಸಲ್ಲಿಸಿದ ಮನವಿ ಮೇರೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಅಂತಹ ದಾರಗಳ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ದಾರವನ್ನು ನಿಷೇಧಿಸುವಂತೆ ನಿರ್ದೇಶನ ನೀಡಿತ್ತು.

ಗಾಳಿಪಟ ಹಾರಿಸಲು ನೈಲಾನ್ ದಾರ ಬಳಸ ಬೇಡಿ ಎಂದು ಪೋಷಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಗಾಳಿಪಟ ಹಾರಿಸುವಾಗ ಬಟ್ಟೆ ದಾರವನ್ನು ಬಳಸಲು ಸೂಚಿಸಬೇಕು, ಇವು ಪ್ರಾಣಿ, ಪಕ್ಷಿಗಳಿಗೆ ಅಪಾಯ ಉಂಟು ಮಾಡುವುದಿಲ್ಲ. ದಾರಗಳೇ ಕ್ರಮೇಣ ತುಂಡಾಗುತ್ತವೆ. ಆದರೆ ಮಾಂಜಾ ದಾರ ಸುಲಭವಾಗಿ ತುಂಡಾಗುವುದಿಲ್ಲ ಎಂದು ಹಸಿರು ನ್ಯಾಯಮಂಡಳಿ ಹೇಳಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಕ್ಷಿ ದೂರುದಾರನಿಗೆ ಆಶ್ರಯ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ಶೋಧ

ಸಾಕ್ಷಿ ದೂರುದಾರ ತಾನು ಉಜಿರೆಯಲ್ಲಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ...

ಆಸ್ಪತ್ರೆ ನಿರ್ಮಾಣ ಹಗರಣ: ಎಎಪಿಯ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ

ದೆಹಲಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಸ್ಪತ್ರೆಗಳ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂಬ...

ದಸರಾ ಉದ್ಘಾಟನೆಗೆ ಬಾನು ಯೋಗ್ಯ ಆಯ್ಕೆ; ಪ್ರಗತಿಪರರ ಮೆಚ್ಚುಗೆ

ಕನ್ನಡದ ಕಥಾಸಂಕಲನಕ್ಕೆ 2025ರ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪುರಸ್ಕೃತ...

ದಸರಾ | ಬಾನು ಮುಷ್ತಾಕ್‌ಗೆ ವಿರೋಧ; ಮಹಿಳಾ ವಿರೋಧಿಗಳ ಹಳಹಳಿಕೆ

ಕೆ ಎಸ್ ನಿಸಾರ್ ಅಹಮದ್ ಅವರು ನಾಡಹಬ್ಬ ಉದ್ಘಾಟನೆ ಮಾಡಿದಾಗ ಇವರೆಲ್ಲ...

Download Eedina App Android / iOS

X