ಗಡಿ ಜಿಲ್ಲೆಯ ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ತೇಲುತ್ತಿದ್ದರೆ, ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಕಾರ್ಯಕರ್ತರು ಕರಾಳ ದಿನಾಚರಣೆ ಆಚರಣೆಗೆ ಹರಸಾಹಸಪಟ್ಟಿದ್ದಾರೆ. ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಪ್ರತಿಭಟನೆಯ ರೂಪದಲ್ಲಿ ಮೆರವಣಿಗೆ ನಡೆಸಿದ್ದಾರೆ. ಆದರೆ, ಕಾರ್ಯಕರ್ತರು ಎಷ್ಟು ಕೂಗಿದರೂ ಮಹಾರಾಷ್ಟ್ರದ ಯಾವೊಬ್ಬ ನಾಯಕ ಕೂಡ ಬೆಳಗಾವಿಗೆ ಬರುವ ಧೈರ್ಯ ಮಾಡಲಿಲ್ಲ. ಜಿಲ್ಲೆ ಪ್ರವೇಶಿಸಲು ಯತ್ನಿಸಿದ ಎಂಇಎಸ್ ಮತ್ತು ಶಿವಸೇನೆ ಉದ್ದವ್ ಬಣದ ಕಾರ್ಯಕರ್ತರನ್ನು ಪೊಲೀಸರು ಗಡಿಯಲ್ಲೇ ತಡೆದು, ವಾಪಸ್ ಕಳಿಸಿದ್ದಾರೆ.
ಬೆಳಗಾವಿಯ ಧರ್ಮವೀರ ಸಂಭಾಜಿ ಮಹಾರಾಜ್ ಉದ್ಯಾನ ಬಳಿ ಎಂಇಎಸ್ ಸದಸ್ಯರು ಕಪ್ಪು ಬಟ್ಟೆ ಧರಿಸಿ ಸೈಕಲ್‌ಗಳನ್ನ ಏರಿ ಪ್ರತಿಭಟನೆ ನಡೆಸಿದ್ಅರೆ. ಬೆಳಗಾವಿ, ಬೀದರ್, ಬಾಲ್ಕಿ, ನಿಪ್ಪಾಣಿ, ಕಾರವಾರ, ಸಗಳ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕೆಂದು ಘೋಷಣೆ ಕೂಗಿದ್ದಾರೆ.
ಮರಾಠ ಮಂದಿರದಲ್ಲಿ ಸಮಾವೇಶ ನಡೆಸಿದ ಎಂಇಎಸ್ ಮುಖಂಡರು ಕರ್ನಾಟಕದ ವಿರುದ್ಧ ಘೋಷಣೆ ಕೂಗಿದ್ದಾರೆ. ಉಸಿರು ಇರುವವರೆಗೂ ಹೋರಾಟ ಜೀವಂತ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. ಇಡೀ ದಿನ ಕನ್ನಡ ದಿನ ಕರಾಳದಿನ ನಡೆಸುವ ಘೋಷಣೆ ಮಾಡಿದ್ದ ಎಂಇಎಸ್ ಮುಖಂಡರು, ಕನ್ನಡಿಗರ ಮೆರವಣಿಗೆಯ ಆರ್ಭಟಕ್ಕೆ ಒಂದೇ ತಾಸಿಗೆ ಕರಾಳ ದಿನ ಅಂತ್ಯ ಮಾಡಿದ್ದಾರೆ.