ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಧರಣಿ ಇಂದಿಗೆ 3ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ಸ್ಥಳಕ್ಕೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟಿಲ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ನಿವೇಶನ ಹಕ್ಕು ಪತ್ರ ಪಡೆದ ನಿವೇಶನ ರಹಿತರಿಗೆ ಗುರುತಿಸಿದ ಸರ್ವೆ ನಂ.581, 929/2, 726/727 ಈ ಸರ್ವೆ ನಂಬರ್ಗಳ ಭೂಮಿಯಲ್ಲಿ ನಿವೇಶನ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪಿಎಂಎವೈ ಯೋಜನೆಯ ಮನೆಗಳ ಕಾಮಗಾರಿ ಹಾಗೂ ಸ್ಲಂ ಘೋಷಣೆ ಮಾಡಲು ಈ ಬಗ್ಗೆ ಪರಿಶೀಲನೆ ಮಾಡಿ, ಇಲಾಖೆಯೊಂದಿಗೆ ಸಭೆ ನಡೆಸಿ ಬೇಡಿಕೆ ಈಡೇರಿಕೆಗೆ ಸ್ಪಂದಿಸಲಾಗುವುದು” ಎಂದು ಭರವಸೆ ನೀಡಿದರು.
“ನಿವೇಶನ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ನಗರಸಭೆಯಿಂದ ನೋಂದಣಿ ಮಾಡಿಸಿ ಮ್ಯುಟೇಷನ್ ಮತ್ತು ಫಾರಂ ನಂ 3 ಶೀಘ್ರದಲ್ಲಿ ನೀಡಬೇಕು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪಿಎಂಎವೈ ಯೋಜನೆಯಿಂದ ಮಂಜೂರಾದ 500 ಮನೆಗಳ ಕಾಮಗಾರಿ 5 ವರ್ಷಗಳು, 2770 ಮನೆಗಳ ಕಾಮಗಾರಿ 3 ವರ್ಷಗಳು ಗತಿಸಿದರೂ ಈವರೆಗೂ ಮನೆಗಳು ಪೂರ್ಣಗೊಳಿಸದೇ ಫಲಾನುಭವಿಗಳನ್ನು ಬೀದಿ ಪಾಲು ಮಾಡಿದ್ದಾರೆ. ಅರ್ಹ ಫಲಾನುಭವಗಳಿಗೆ ಮನೆಗಳ ಹಂಚಿಕೆಗೆ ಕ್ರಮ ವಹಿಸಲಾಗುತ್ತದೆ” ಎಂದು ಭರವಸೆ ನೀಡಿದರು.
“ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಪರಿಶೀಲನೆ ಮಾಡಿ ಅಗತ್ಯ ಸೌಲಭ್ಯ ಒದಗಿಸಿ ಬಾಕಿ ಮನೆಗಳಿಗೆ ಮಂಜೂರು ಮಾಡಿ ಕ್ರಮ ವಹಿಸಲಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬ್ಯಾಂಕ್ಗಳಲ್ಲಿ ಹೊರಗುತ್ತಿಗೆ ನಿಲ್ಲಿಸಿ, ನೇಮಕಾತಿ ಮಾಡಿ: ಸ್ಟೀಫನ್ ಜಯಚಂದ್ರ
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್, ಪಾಂಡ್ವೆ ತುಕಾರಾಂ, ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಕೆ ಪಿ ಅನಿಲಕುಮಾರ, ಉಪಾಧ್ಯಕ್ಷ ವೆಂಕಟೇಶ ಭಂಡಾರಿ, ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಸೂರು, ಎಂ ಆರ್ ಬೇರಿ, ಮಹೇಶ, ನಾಗರಾಜ, ಜಂಬಣ್ಣ, ಹುಲಿಗೆಮ್ಮ, ವೀರೇಶ, ನಾಗಮ್ಮ, ನರಸಮ್ಮ, ಅನುಮಂತಿ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ