ತನ್ನ ಪ್ರೇಯಸಿ ಔಟಿಂಗ್ ಹೋಗಲು ಹೊರಗೆ ಬರಲಿಲ್ಲವೆಂದು ಯುವಕನೊಬ್ಬ ಆಕೆಯಿದ್ದ ಕಟ್ಟಡಕ್ಕೆ (ಪಿಜಿ) ಕಲ್ಲು ಎಸೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ. ಆತನನ್ನು ಹಿಡಿದು ಸ್ಥಳೀಯರು ಥಳಿಸಿದ್ದಾರೆ.
ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗದ ಪಿಜಿಯಲ್ಲಿ ಯುವತಿ ವಾಸವಿದ್ದಳು. ಆಕೆಯನ್ನು ಔಟಿಂಗ್ ಹೋಗಲು ಆಕೆಯ ಪ್ರಿಯಕರ, ಸುಳ್ಯ ನಿವಾಸಿ ವಿವೇಕ್ (18) ಸುರೇಶ್ ಶೆಟ್ಟಿ ಎಂಬಾತ ಕರೆದಿದ್ದನು ಎಂದು ಹೇಳಲಾಗಿದೆ.
ಆದರೆ, ಆಕೆ ಔಟಿಂಗ್‌ಗೆ ಹೋಗಲು ನಿರಾಕರಿಸಿದ್ದರು. ಆಕೆಯ ನಿರಾಕರಣೆಯಂದ ಕೋಪಗೊಂಡ ವಿವೇಕ್, ಆಕೆಯಿದ್ದ ಪಿಜೆಗೆ ಕಲ್ಲು ತೂರಿದ್ದಾನೆ. ಪರಿಣಾಮ ಕಟ್ಟಡದ ಗಾಜು ಒಡೆದುಹೋಗಿದೆ.
ಆತ ಕಲ್ಲು ತೂರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಸ್ಥಳೀಯರು ಆತನನ್ನು ಹಿಡಿದು, ಥಳಿಸಿದ್ದಾರೆ ಎಂದು ವರದಿಯಾಗಿದೆ.